ADVERTISEMENT

ಹೇಮಂತ್ ಅವರ 'ಮತ್ತೆ ಮತ್ತೆ ಮಳೆ' ಕವನ ಸಂಕಲನಕ್ಕೆ K.V ರತ್ನಮ್ಮ ದತ್ತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 10:21 IST
Last Updated 8 ಫೆಬ್ರುವರಿ 2026, 10:21 IST
   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ 2024ನೇ ಸಾಲಿನ 'ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ' ಪ್ರಶಸ್ತಿಗೆ ಹೇಮಂತ್ ಲಿಂಗಪ್ಪ ಅವರು ಬರೆದಿರುವ 'ಮತ್ತೆ ಮತ್ತೆ ಮಳೆ' ಕವನ ಸಂಕಲನ ಆಯ್ಕೆಯಾಗಿದೆ.

ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳನ್ನು ಆಯ್ಕೆ ಮಾಡಲು ರಚಿಸಲಾದ ಹಿರಿಯ ವಿದ್ವಾಂಸ ಡಾ.ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿ 'ದಿವಂಗತ ಕೆ.ವಿ. ರತ್ನಮ್ಮ ದತ್ತಿ' ಪ್ರಶಸ್ತಿಗೆ ಹೇಮಂತ್ ಕೆ. ಲಿಂಗಪ್ಪ ಅವರು ಬರೆದಿರುವ ಈ ಕವನ ಸಂಕಲನವನ್ನು ಆಯ್ಕೆ ಮಾಡಿದೆ.

ಹೇಮಂತ್ ಲಿಂಗಪ್ಪ ಅವರು ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕವನಗಳ ರಚನೆ ಅವರ ಪ್ರವೃತ್ತಿಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.