ADVERTISEMENT

ಜಂಬುಕೇಶ್ವರ, ಮಧು ದೇಸಾಯಿ, ಉಪಾಧ್ಯಾಯರಿಗೆ ಲಲಿತಕಲಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 15:52 IST
Last Updated 5 ಅಕ್ಟೋಬರ್ 2018, 15:52 IST
ಸಾಹಿತಿ ಚಂದ್ರಶೇಖರ ಕಂಬಾರ ಅವರು ಕಲಾವಿದರಾದ ಎಸ್.ಎಂ ಜಂಬುಕೇಶ್ವರ, ಉಪಾಧ್ಯಾಯ ಮೂಡುಬೆಳ್ಳೆ, ಮತ್ತು ಮಧು ದೇಸಾಯಿ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಅಕಾಡೆಮಿ ಸದಸ್ಯ ಡಿ.ಅಭಿಲಾಷ್ , ರಿಜಿಸ್ಟ್ರಾರ್ ಎಚ್‌.ವಿ.ಇಂದ್ರಮ್ಮ, ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿಯ ಕಾರ್ಯದರ್ಶಿ ಡಾ.ವಿ.ಜಿ ಅಂದಾನಿ ಮತ್ತು ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ ಕಮಲಾಕ್ಷಿ ಇದ್ದಾರೆ -ಪ್ರಜಾವಾಣಿ ಚಿತ್ರ

ಬೆಂಗಳೂರು: ಕಲಾವಿದರಾದ ಮೈಸೂರಿನ ಎಸ್‌.ಎಂ.ಜಂಬುಕೇಶ್ವರ, ಧಾರವಾಡದ ಮಧು ದೇಸಾಯಿ, ಉಡುಪಿಯ ಉಪಾಧ್ಯಾಯ ಮೂಡುಬೆಳ್ಳೆ ಅವರಿಗೆ 2018ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

47ನೇ ವಾರ್ಷಿಕ ಕಲಾಪ್ರದರ್ಶನ ಬಹುಮಾನವನ್ನು ಬಾಗಲಕೋಟೆಯ ಇಂದ್ರಕುಮಾರ.ಬಿ.ದಸ್ತೇನವರ, ಹಾವೇರಿಯ ಕರಿಯಪ್ಪ ಹಂಚಿನಮನಿ, ಬೆಳಗಾವಿಯ ಶಂಕರ ಬಿ.ಲೋಹಾರ, ಬೆಂಗಳೂರಿನ ಆರ್‌.ವೆಂಕಟರಾಮನ್‌, ಬಾಗೂರು ಮಾರ್ಕಾಂಡೇಯ, ಶಿವಮೊಗ್ಗದ ಕೋಟೆಗದ್ದೆ ಎಸ್‌.ರವಿ, ಕಲಬುರ್ಗಿಯ ಡಾ.ಸುಬ್ಬಯ್ಯ ಎಂ.ನೀಲಾ, ಶ್ರೀಶೈಲ ಗುಡೇದ, ಮಂಡ್ಯದ ವಿ.ಇ. ಅಕ್ಷಯ್‌ ಕುಮಾರ್‌, ಹುಬ್ಬಳ್ಳಿಯ ಗಣೇಶ ಎಸ್‌.ಸಾಬೋಜಿ ಅವರಿಗೆ ನೀಡಿ ಗೌರವಿಸಲಾಯಿತು.

ADVERTISEMENT

ಗೌರವ ಪ್ರಶಸ್ತಿಗೆ ₹ 50 ಸಾವಿರ ಹಾಗೂ ಕಲಾಪ್ರದರ್ಶನ ಬಹುಮಾನ ಪಡೆದ ಹತ್ತು ಕಲಾವಿದರಿಗೆ ₹25 ಸಾವಿರ ನಗದು ಬಹುಮಾನ ನೀಡಲಾಯಿತು.

ಸಾಹಿತಿ ಚಂದ್ರಶೇಖರ ಕಂಬಾರ ಅವರು ಮಾತನಾಡಿ, ‘ಚಿತ್ರಗಳನ್ನು ನೋಡಿ ಕೂಡ ನಾನು ಪದ್ಯ ಬರೆದಿದ್ದೇನೆ. ಎಲ್ಲಾ ಪ್ರಕಾರದ ಕಲೆಗೂ ಒಂದೇ ರೀತಿಯ ಮನ್ನಣೆ ಸಿಗಬೇಕು. ಬ್ರಿಟೀಷರು ಭಾರತಕ್ಕೆ ಬರುವ ಮೊದಲು ಇದೇ ವ್ಯವಸ್ಥೆ ಇತ್ತು. ಆದರೆ ಆ ನಂತರ ಕಲೆ, ಸಾಹಿತ್ಯ ಬೇರೆ, ಬೇರೆ ಎನ್ನುವ ಮನಸ್ಥಿತಿ ಹುಟ್ಟಿಕೊಂಡಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಪ್ರಶಸ್ತಿ ಪಡೆದವರು ಚಿತ್ರಕಲೆಯ ಮೂಲಕ ಪ್ರೌಢಭಾಷೆಯನ್ನು ಬಳಸಿದ್ದಾರೆ. ಕಲಾವಿದರ ಚಿತ್ರಗಳನ್ನು ನೋಡಿದಾಗ ಆಶಾಭಾವನೆ ಮೂಡಿಬರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.