ADVERTISEMENT

ಹಳ್ಳಿ, ಶಾಲೆಗಳಲ್ಲಿ ‘ಲ್ಯಾಂಡ್‌ ಲಾರ್ಡ್‌’ ಪ್ರದರ್ಶನಕ್ಕೆ ಪ್ರಯತ್ನ: ಉಮಾಶ್ರೀ

ಚಿತ್ರ ಸಂವಾದದಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅಭಯ, ಪ್ರಮುಖರ ಭಾಗಿ,

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 23:33 IST
Last Updated 14 ಫೆಬ್ರುವರಿ 2026, 23:33 IST
ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಲ್ಯಾಂಡ್‌ ಲಾರ್ಡ್‌–ಒಂದು ಸಂವಾದ ಕಾರ್ಯಕ್ರಮದಲ್ಲಿ ಉಮಾಶ್ರೀ, ಕೆ.ವೈ. ನಾರಾಯಣಸ್ವಾಮಿ, ದುನಿಯಾ ವಿಜಯ್, ಸಿದ್ದನಗೌಡ ಪಾಟೀಲ್ ಮತ್ತು ಮಾವಳ್ಳಿ ಶಂಕರ್ ಪಾಲ್ಗೊಂಡಿದ್ದರು.          
ಪ್ರಜಾವಾಣಿ ಚಿತ್ರ
ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಲ್ಯಾಂಡ್‌ ಲಾರ್ಡ್‌–ಒಂದು ಸಂವಾದ ಕಾರ್ಯಕ್ರಮದಲ್ಲಿ ಉಮಾಶ್ರೀ, ಕೆ.ವೈ. ನಾರಾಯಣಸ್ವಾಮಿ, ದುನಿಯಾ ವಿಜಯ್, ಸಿದ್ದನಗೌಡ ಪಾಟೀಲ್ ಮತ್ತು ಮಾವಳ್ಳಿ ಶಂಕರ್ ಪಾಲ್ಗೊಂಡಿದ್ದರು.           ಪ್ರಜಾವಾಣಿ ಚಿತ್ರ    

ಬೆಂಗಳೂರು: ‌‘ಭೂಮಿಯ ಹಕ್ಕುಗಳ ಜತೆಗೆ ಸಾಮಾಜಿಕ ಸಮಸ್ಯೆಗಳಿಗೆ ದನಿಯಾಗಿರುವ ಲ್ಯಾಂಡ್‌ ಲಾರ್ಡ್‌ ಚಿತ್ರವನ್ನು ಎಲ್ಲ ಶಾಲೆಗಳು ಹಾಗೂ ಹಳ್ಳಿಗಳಲ್ಲಿ ಪ್ರದರ್ಶಿಸಲು ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸುವೆ’ ಎಂದು ನಟಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಹೇಳಿದರು.

ಸಮಾನ ಮನಸ್ಕರ ವೇದಿಕೆ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಸಂವಾದದ ವೇಳೆ ಪ್ರೇಕ್ಷಕರಿಂದ ಬಂದ ಪ್ರತಿಕ್ರಿಯೆಗೆ ಅವರು ಉತ್ತರಿಸಿದರು.

ಹೋರಾಟಗಾರ ಸಿದ್ದನಗೌಡ ಪಾಟೀಲ ಮಾತನಾಡಿ, ‘ಊಳಿಗಮಾನ್ಯ ಪದ್ದತಿ ಹಿನ್ನೆಲೆಯಲ್ಲಿ ಲ್ಯಾಂಡ್‌ ಲಾರ್ಡ್‌ ಚಿತ್ರ ಹೊರ ಬಂದಿದೆ. ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೇ ಭೂಮಿಯ ಒಡೆಯ ಎನ್ನುವ ಪರಿಕಲ್ಪನೆ ಕಾನೂನು ರೂಪ ಪಡೆಯಿತು. ಆ ನಂತರದ ಬೆಳವಣಿಗೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಅದರ ಪರಿಣಾಮ ಈಗಲೂ ಹೇಗಿದೆ ಎನ್ನುವುದನ್ನು ಚಿತ್ರ ಬಿಂಬಿಸಿದೆ’ ಎಂದು ತಿಳಿಸಿದರು.

ADVERTISEMENT

ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ(ಅಂಬೇಡ್ಕರ್‌ ವಾದ) ಮಾವಳ್ಳಿ ಶಂಕರ್‌, ನಿರ್ದೇಶಕ ಜಡೇಶ ಕೆ.ಹಂಪಿ, ಬಿ.ಎಂ.ಗಿರಿರಾಜ್, ಮಾಸ್ತಿ ಉಪ್ಪಾರಳ್ಳಿ, ವಿ.ಕೆ. ಸಂಜ್ಯೋತಿ, ಹುಲಿಕುಂಟೆ ಮೂರ್ತಿ, ವಿ.ಆರ್‌.ಕಾರ್ಪೆಂಟರ್‌, ಫಕೀರೇಶ್‌, ಪ್ರಕಾಶ ಮಂಟೇದ, ಮಧು ಹೊಲೆಯಾರ್‌, ಅಶ್ವಿನಿ ಬೋಧ್‌ ಸಿನಿಮಾ ಕುರಿತು ಮಾತನಾಡಿದರು.

ಚುನಾವಣೆ ವೇಳೆ ಮತ ಕೇಳಲು ಬರುವವರು ಅಧಿಕಾರ ಬಂದ ಮೇಲೆ ಲ್ಯಾಂಡ್ ಲಾರ್ಡ್‌ ರೀತಿಯ ಚಿತ್ರ ನೋಡಲು ಬರುತ್ತಿಲ್ಲ ಎನ್ನುವ ಬೇಸರವಿದೆ.
ದುನಿಯಾ ವಿಜಯ್‌ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.