ADVERTISEMENT

ನೆಹರೂ ತಾರಾಲಯದಲ್ಲಿ ‘ಸ್ಕೈ ಶೋ’ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 18:20 IST
Last Updated 6 ಏಪ್ರಿಲ್ 2024, 18:20 IST
<div class="paragraphs"><p>ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಗಗನಯಾನದ ಪ್ರಾತ್ಯಕ್ಷಿತೆಯನ್ನು ಎ.ಎಸ್. ಕಿರಣ್‌ ಕುಮಾರ್, ಆರ್. ಹಟನ್‌ ವೀಕ್ಷಿಸಿದರು. </p></div>

ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಗಗನಯಾನದ ಪ್ರಾತ್ಯಕ್ಷಿತೆಯನ್ನು ಎ.ಎಸ್. ಕಿರಣ್‌ ಕುಮಾರ್, ಆರ್. ಹಟನ್‌ ವೀಕ್ಷಿಸಿದರು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಭಾರತೀಯ ಗಗನಯಾನದ ಆರಂಭ, ವಿಕಾಸ ಹಾಗೂ ಸಾಧನೆಗಳು, ಗಗನಯಾತ್ರಿಗಳ ತರಬೇತಿ, ಎಚ್‌ಎಲ್‌ವಿ 3ರ ಉಡ್ಡಯನ ಸೇರಿದಂತೆ ಉಪಗ್ರಹ ಯಾವ ರೀತಿಯಾಗಿ ಉಡಾವಣೆಯ ಆಗುತ್ತದೆ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಜವಾಹರಲಾಲ್‌ ನೆಹರೂ ತಾರಾಲಯಕ್ಕೆ ಭೇಟಿ ನೀಡಬೇಕು.

ADVERTISEMENT

ಸೌಂಡಿಂಗ್‌ ರಾಕೆಟ್‌ಗಳಿಂದ ಈಗಿನ ಗಗನಯಾನದವರೆಗಿನ ‘ಭಾರತೀಯ ಅಂತರಿಕ್ಷ ಯಾತ್ರೆ’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಸ್ಕೈ ಶೋ’ (ಆಕಾಶ ದರ್ಶನ) ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ ಕುಮಾರ್ ಹಾಗೂ ಇಸ್ರೊದ ಗಗನಯಾನ ಯೋಜನಾ ನಿರ್ದೇಶಕ ಆರ್. ಹಟನ್‌ ಶನಿವಾರ ಚಾಲನೆ ನೀಡಿದರು.

ಎ.ಎಸ್. ಕಿರಣ್‌ ಕುಮಾರ್‌, ‘1960ರಲ್ಲಿ ಸೌಂಡಿಂಗ್‌ ರಾಕೆಟ್‌ನಿಂದ ಇಂದಿನ ಗಗನಯಾನದವರೆಗೆ ವಿವಿಧ ಅಭಿವೃದ್ಧಿ ಹಂತಗಳನ್ನು ಮುಂದಿನ ಪೀಳಿಗೆಯವರಿಗೆ ಅರ್ಥವಾಗುವಂತೆ ನೀಡಲಾಗಿದೆ. ಚಂದ್ರಯಾನ–3ರ ಯಶಸ್ಸಿನ ನಂತರ ವಿಶ್ವದಲ್ಲಿ ಹೆಚ್ಚಿನ ಯುವಕರಲ್ಲಿ ವಿಜ್ಞಾನ, ಬಾಹ್ಯಾಕಾಶ ಬಗ್ಗೆ ಹೆಚ್ಚು ಆಸಕ್ತಿ ಮೂಡಿದೆ. ಜವಾಹರಲಾಲ್‌ ನೆಹರೂ ತಾರಾಲಯವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ’ ಎಂದರು.

ಸ್ಕೈ ಶೋ’: ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಏ.7ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಪ್ರತಿ ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರ ಹೊರತುಪಡಿಸಿ, ಪ್ರತಿದಿನ ಬೆಳಿಗ್ಗೆ 10.30ಕ್ಕೆ ಇಂಗ್ಲಿಷ್‌ ಭಾಷೆಯಲ್ಲಿ ಹಾಗೂ ಬೆಳಿಗ್ಗೆ 11.30ಕ್ಕೆ ಕನ್ನಡ ಭಾಷೆಯಲ್ಲಿ ಈ ‘ಸ್ಕೈ ಶೋ’ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನ ಎರಡು ತಿಂಗಳವರೆಗೆ ನಡೆಯಲಿದೆ ಎಂದು ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.