ADVERTISEMENT

ಮಾರ್ಕ್ಸ್‌ವಾದ ಆಚರಣೆಗೆ ಬರಬೇಕು: ಕೆ. ರಾಧಾಕೃಷ್ಣ

ಸಮಾಜವಾದಿ ಲೆನಿನ್‌ ಮರಣ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 15:23 IST
Last Updated 21 ಜನವರಿ 2024, 15:23 IST
<div class="paragraphs"><p>ಶಿವದಾಸ್ ಘೋಷ್‌ ಅವರ ಕೃತಿಗಳ ಕನ್ನಡ ಅನುವಾದಿತ ನಾಲ್ಕು ಪುಸ್ತಕಗಳನ್ನು ಲೆನಿನ್‌ ಅವರ ಮರಣ ಶತಮಾನೋತ್ಸವದ ಅಂಗವಾಗಿ ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. </p></div>

ಶಿವದಾಸ್ ಘೋಷ್‌ ಅವರ ಕೃತಿಗಳ ಕನ್ನಡ ಅನುವಾದಿತ ನಾಲ್ಕು ಪುಸ್ತಕಗಳನ್ನು ಲೆನಿನ್‌ ಅವರ ಮರಣ ಶತಮಾನೋತ್ಸವದ ಅಂಗವಾಗಿ ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

   

ಬೆಂಗಳೂರು: ‘ಮಾರ್ಕ್ಸ್‌ವಾದವನ್ನು ತಿಳಿದರೆ ಸಾಲದು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಚರಣೆಗೆ ತರಬೇಕು’ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್‌) ಪಾಲಿಟ್‌ ಬ್ಯೂರೊ ಸದಸ್ಯ ಕೆ. ರಾಧಾಕೃಷ್ಣ ತಿಳಿಸಿದರು.

ಪ್ರಥಮ ಸಮಾಜವಾದಿ ಕ್ರಾಂತಿಯ ರೂವಾರಿ ಲೆನಿನ್‌ ಅವರ ಮರಣ ಶತಮಾನೋತ್ಸವದ ಅಂಗವಾಗಿ ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಹಮ್ಮಿಕೊಂಡಿದ್ದ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ನಾವು ತತ್ವಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಇಲ್ಲದೇ ಇದ್ದರೆ ಪರಿಷ್ಕರಣಾವಾದಕ್ಕೆ ಒಳಗಾಗುತ್ತೇವೆ. ಲೆನಿನ್ ಅವರು ಮಾರ್ಕ್ಸ್‌ವಾದವನ್ನು ಗ್ರಹಿಸಿದ್ದಲ್ಲದೇ, ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದೇ ರಷ್ಯನ್ ಮಹಾಕ್ರಾಂತಿ’ ಎಂದು ನೆನಪಿಸಿದರು.

ಸಾಮ್ರಾಜ್ಯವಾದ ಮತ್ತು ಕಾರ್ಮಿಕವರ್ಗದ ಕ್ರಾಂತಿಗಳ ಯುಗದ ಮಾರ್ಕ್ಸ್‌ವಾದವೇ ಲೆನಿನ್‍ವಾದ ಎಂದು ವಿವರಿಸಿದರು.

ಶಿವದಾಸ್ ಘೋಷ್‌ ಅವರ ಕೃತಿಗಳ ಕನ್ನಡ ಅನುವಾದಿತ ನಾಲ್ಕು ಪುಸ್ತಕಗಳಾದ ‘ನವೆಂಬರ್ ಮಹಾಕ್ರಾಂತಿಯ ಪತಾಕೆ ಎತ್ತಿ ಹಿಡಿಯಿರಿ’, ‘ವೈಜ್ಞಾನಿಕ ದ್ವಂದ್ವಾತ್ಮಕ ವಿಧಾನ ಕ್ರಮವೇ ಮಾರ್ಕ್ಸ್‌ವಾದಿ ವಿಜ್ಞಾನ’, ‘ಚೆಕೊಸ್ಲೋವಾಕಿಯಾದಲ್ಲಿ ಸೋವಿಯತ್ ಮಿಲಿಟರಿ ಹಸ್ತಕ್ಷೇಪ ಮತ್ತು ಪರಿಷ್ಕರಣವಾದ’, ‘ಭಾರತದಲ್ಲಿ ಜನ ಹೋರಾಟಗಳ ಸಮಸ್ಯೆಗಳು’ ಬಿಡುಗಡೆಗೊಂಡವು.

ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಉಮಾ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.