ADVERTISEMENT

ಪ್ರಶ್ನಿಸಲು ಪ್ರೇರೇಪಿಸುವ ರಂಗಭೂಮಿಯನ್ನು ಉಳಿಸೋಣ: ಜಿ ಎನ್ ಮೋಹನ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 14:23 IST
Last Updated 2 ಫೆಬ್ರುವರಿ 2026, 14:23 IST
<div class="paragraphs"><p>ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಷ್ಟ್ರೀಯ ರಂಗಶಾಲೆ ಹಮ್ಮಿಕೊಂಡಿದ್ದ ರಂಗ ಪರಿಷೆ</p></div>

ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಷ್ಟ್ರೀಯ ರಂಗಶಾಲೆ ಹಮ್ಮಿಕೊಂಡಿದ್ದ ರಂಗ ಪರಿಷೆ

   

ಬೆಂಗಳೂರು: ರಂಗಭೂಮಿ ಹಾಗೂ ಸಾಹಿತ್ಯ ಸದಾ ಪ್ರಶ್ನೆ ಮಾಡಲು ಪ್ರೇರೇಪಿಸುತ್ತದೆ. ಸ್ಥಗಿತಗೊಂಡ ಸಮಾಜವನ್ನು ಎಚ್ಚರಗೊಳಿಸುವ ಕೆಲಸ ನಿರಂತರವಾಗಿರಲಿ ಎಂದು ಸಾಹಿತಿ ಜಿ ಎನ್ ಮೋಹನ್ ಅಭಿಪ್ರಾಯಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಷ್ಟ್ರೀಯ ರಂಗಶಾಲೆ ಹಮ್ಮಿಕೊಂಡಿದ್ದ ರಂಗ ಪರಿಷೆಯಲ್ಲಿ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ADVERTISEMENT

ಪುಸ್ತಕಗಳನ್ನು ದ್ವೇಷಿಸುವ ನಾಜಿ ಕಾಲವಿತ್ತು. ಈಗ ದೇಶದೆಲ್ಲೆಡೆ ಅಂತಹದೇ ವಾತಾವರಣವನ್ನು ಸೃಷ್ಟಿಸಿ, ಪುಸ್ತಕ ದ್ವೇಷವನ್ನು ಹರಡಲಾಗುತ್ತಿದೆ. ಪ್ರಶ್ನೆ ಮಾಡುವ ಮನಸ್ಸನ್ನು ಮುರುಟಿ ಹಾಕುವ ಯತ್ನ ನಡೆಯುತ್ತಿದೆ. ಇದರ ವಿರುದ್ಧ ಜಾಗೃತಿ ಸದಾ ಅಗತ್ಯ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್ ಎನ್ ಮುಕುಂದರಾಜ್ ಅವರು ಮಾತನಾಡಿ ರಂಗಭೂಮಿ ಹಾಗೂ ಸಾಹಿತ್ಯವನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಎರಡೂ ಸಹಾ ಗಂಡಬೇರುಂಡದಂತೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ನಾಗರಾಜ ಮೂರ್ತಿ ಅವರು ಮಾತನಾಡಿ ಮಾನವೀಯ ಸಮಾಜವನ್ನು ಸೃಷ್ಟಿಸುವುದು ಇಂದಿನ ಅಗತ್ಯ. ಮನಸ್ಸನ್ನು ಕಲುಷಿತಗೊಳಿಸುತ್ತಿರುವ ಕಾಲದ ಬಗ್ಗೆ ಎಚ್ಚರ ಇರಲಿ ಎಂದರು.

ಕಾವ್ಯ ಪರಿಷೆ ಮುಖ್ಯಸ್ಥರಾದ ಮಲ್ಲಿಕಾರ್ಜುನ ಮಹಾಮನೆ, ಕವಿ ಅಂಕಣಕಾರ ಬಿ ಎನ್ ಮಲ್ಲೇಶ್, ಅಕಾಡೆಮಿ ಸದಸ್ಯರುಗಳಾದ ಮಮತಾ ಅರಸೀಕೆರೆ, ರವಿಕುಮಾರ್ ಭಾಗಿ ಉಪಸ್ಥಿತರಿದ್ದರು.

ಟಿ.ಗೋವಿಂದರಾಜು, ಬ್ಯಾಡರಹಳ್ಳಿ ಶಿವರಾಜು, ಪ್ರವೀಣ್ ಮೈಸೂರು, ಪದ್ಮ ಚಿನ್ಮಯಿ, ಚಂದ್ರ ಮೊಗೇರ, ಪುನೀತ್ ತಥಾಗತ್, ಕಸ್ತೂರಿಪತ್ತಾರ, ಪ್ರಕೃತಿ ಶೆಟ್ಟಿ, ರುಕ್ಮಿಣಿ ನಾಯರ್ ಕವನ ವಾಚಿಸಿದರು‌

ನಂತರ ನಡೆದ ಸಮಾರಂಭದಲ್ಲಿ ಕಲಾವಿದೆ ಗಿರಿಜಾ ಲೋಕೇಶ್ ಅವರಿಗೆ ಗೌರವ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.