
ಪ್ರಜಾವಾಣಿ ವಾರ್ತೆಬೆಂಗಳೂರು: ದಿನಪತ್ರಿಕೆ ವಿತರಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಲ್. ಜೀವನ್ ಆಯ್ಕೆಯಾದರು.
ಸಂಘದ 2024ರಿಂದ 2029ರ ಅವಧಿಯ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಚುನಾವಣೆಯಲ್ಲಿ ಪದಾಧಿಕಾರಿಗಳಾಗಿ ಎಲ್. ಜೀವನ್, ಮಹೇಶ್, ನರಸಿಂಹ ರೆಡ್ಡಿ ಕೆ.ಎಲ್., ಶ್ರೀನಿವಾಸ್ ಟಿ., ಮೋಹನ್ ಕುಮಾರ್ ಆರ್., ಹೇಮಂತ್ ಕುಮಾರ್ ಎಸ್., ಚಂದ್ರ ಕುಮಾರ್ ಯು., ಜಗದೀಶ್ ಆರ್., ಶ್ವೇತಾ ಬಿ.ಕೆ. ಅವಿರೋಧವಾಗಿ ಆಯ್ಕೆಯಾದರು. ಬಳಿಕ ಎಲ್. ಜೀವನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಜೀವನ್ 23 ವರ್ಷಗಳಿಂದ ನಗರದ ಬ್ಯಾಂಕ್ ಕಾಲೊನಿಯಲ್ಲಿ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.