ADVERTISEMENT

ಕಾರಿನ ಬಾನೆಟ್‌ ಮೇಲೆ ಹತ್ತಿ ಗೂಂಡಾಗಿರಿ ಮಾಡಿದ್ದವರಿಗೆ ಬಿಸಿ ಮುಟ್ಟಿಸಿದ ಬಿಸಿಪಿ!

ಇತ್ತೀಚೆಗೆ ಕೋರಮಂಗಲ ಬಳಿ ರಸ್ತೆಯಲ್ಲಿ ನಡೆದಿದ್ದ ದುರ್ಘಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2025, 12:51 IST
Last Updated 17 ಜನವರಿ 2025, 12:51 IST
<div class="paragraphs"><p>ಇತ್ತೀಚೆಗೆ ಕೋರಮಂಗಲ ಬಳಿ ರಸ್ತೆಯಲ್ಲಿ ನಡೆದಿದ್ದ ದುರ್ಘಟನೆ</p></div>

ಇತ್ತೀಚೆಗೆ ಕೋರಮಂಗಲ ಬಳಿ ರಸ್ತೆಯಲ್ಲಿ ನಡೆದಿದ್ದ ದುರ್ಘಟನೆ

   

ಬೆಂಗಳೂರು: ಇತ್ತೀಚೆಗೆ ಕೋರಮಂಗಲ ಬಳಿ ರಸ್ತೆಯಲ್ಲಿ ಕೆಲ ಯುವಕರು ಕಾರೊಂದನ್ನು ಅಡ್ಡಗಟ್ಟಿ ಕಾರಿನ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು (ಬಿಸಿಪಿ) ಆರೋಪಿ ಯುವಕರನ್ನು ವಶಕ್ಕೆ ಪಡೆದಿದ್ದರು.

ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸ್ ಈ ಕುರಿತು ಎಕ್ಸ್‌ ತಾಣದಲ್ಲಿ ಮಾಹಿತಿ ಹಂಚಿಕೊಂಡು ಯುವಕರು ಇನ್ನೊಮ್ಮೆ ಈ ರೀತಿ ತಪ್ಪು ಮಾಡದಂತೆ ವ್ಯಂಗ್ಯವಾಗಿ ವಿಡಿಯೊ ಟ್ವೀಟ್ ಮಾಡಿದೆ. ಅಲ್ಲದೇ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಪ್ರತಿಯನ್ನು ಹಂಚಿಕೊಂಡಿದೆ.

ADVERTISEMENT

‘ರಸ್ತೆಯಲ್ಲಿ ತಂಪಾಗಿರಲು ಸಾಧ್ಯವಾಗದ ಎರಡು ಹಾಟ್ ಹೆಡ್‌ಗಳು (ಬಿಸಿ ರಕ್ತದ ಇಬ್ಬರು ಯುವಕರು) ಮಾಡಿದ ತಪ್ಪಿಗೆ ಈಗ ಕಸ್ಟಡಿಯಲ್ಲಿ ಕೂತಿದ್ದಾರೆ. ಚಾಲನೆ ಮಾಡುವಾಗ ಕೂಲ್ ಆಗಿ ಇರಿ’ ಎಂದು ವಿಡಿಯೊ ಹಂಚಿಕೊಂಡು ಸಂಚಾರ ಜಾಗೃತಿಯನ್ನು ಈ ಮೂಲಕ ಮೂಡಿಸಲಾಗಿದೆ.

ಡಿಸೆಂಬರ್ 28ರಂದು ಕೋರಮಂಗಲ ಬಳಿ ಘಟನೆ ನಡೆದಿತ್ತು. ಮತ್ತೊಂದು ಕಾರಿನ ಡ್ಯಾಶ್ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆ ಆಗಿರುವ ವಿಡಿಯೊವನ್ನು ‘ಎಕ್ಸ್’ ಖಾತೆಯಲ್ಲಿ ವ್ಯಕ್ತಿಯೊಬ್ಬರು ಅಪ್‌ಲೋಡ್ ಮಾಡಿದ್ದರು.

ಏನಾಗಿತ್ತು?

ಮುಖ್ಯ ರಸ್ತೆಯಲ್ಲಿ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಒಂದನ್ನು ಚಾಲನೆ ಮಾಡಿಕೊಂಡು ಚಾಲಕ ತೆರಳುತ್ತಾನೆ. ಕಾರನ್ನು ಹಿಂಬಾಲಿಸಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ನಡುರಸ್ತೆಯಲ್ಲೇ ಕಾರನ್ನು ಅಡ್ಡಗಟ್ಟುತ್ತಾರೆ. ಒಬ್ಬನು ಕಾರು ಚಾಲಕನನ್ನು ಕೆಳಕ್ಕೆ ಇಳಿಯುವಂತೆ ಒತ್ತಾಯ ಮಾಡುತ್ತಾನೆ. ಮತ್ತೊಬ್ಬ ಕಾರಿನ ಬಾನೆಟ್ ಮೇಲೇರಿ ವಿಂಡ್ ಶೀಲ್ಡ್‌ಗೆ ಒದ್ದು ಆಕ್ರೋಶ ಹೊರಹಾಕುತ್ತಾನೆ. ಬಳಿಕ ಸಿಗ್ನಲ್ ತೆರವಾಗುತ್ತಿದ್ದಂತೆ ಕಾರಿನ ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಮುಂದಕ್ಕೆ ಸಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಪಕ್ಕದ ಕಾರಿನ ಡ್ಯಾಶ್‌ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.