ದಾಬಸ್‌ಪೇಟೆ: ಮದ್ಯ ನಿಷೇಧ ಆಂದೋಲನದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕುಲವನಹಳ್ಳಿಯ ರೇಣುಕಮ್ಮ (60) ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಡಿಗೆ ಕೈಗೊಂಡಿದ್ದ ವೇಳೆ ಈ ದುರಂತ ಸಂಭವಿಸಿದೆ.
ಮದ್ಯನಿಷೇಧದ ಈ ಪಾದಯಾತ್ರೆ ಚಿತ್ರದುರ್ಗದಿಂದ ಜ.19ಕ್ಕೆ ಹೊರಟಿದ್ದು, 30ಕ್ಕೆ ಬೆಂಗಳೂರು ತಲುಪಲಿದೆ. ಸುಮಾರು 2 ಸಾವಿರ ಮಹಿಳೆಯರು ಜಾಥಾದಲ್ಲಿ ಭಾಗವಹಿಸಿದ್ದು, ಪ್ರತಿದಿನ 20 ಕಿ.ಮೀ ದೂರ ಸಾಗಲಿದ್ದಾರೆ.
ಇವನ್ನೂ ಓದಿ
‘ಶಕ್ತಿಕೇಂದ್ರ’ ಮುತ್ತಲಿರುವ ಮಹಿಳೆಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.