ADVERTISEMENT

ಸಹಭಾಗಿತ್ವದ ಸಂಭ್ರಮ: ಗುಣಮಟ್ಟದ ಶಿಕ್ಷಣ ಕೇಂದ್ರಗಳಾಗಿ ಅಂಗನವಾಡಿ

ಮಕ್ಕಳ ಜಾಗೃತಿ ಸಂಸ್ಥೆ, ಬಾಷ್‌ನಿಂದ ‘ಸಹಭಾಗಿತ್ವದ ಸಂಭ್ರಮ’ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 15:55 IST
Last Updated 20 ಫೆಬ್ರುವರಿ 2026, 15:55 IST
‘ಸಹಭಾಗಿತ್ವದ ಸಂಭ್ರಮ’ ಕಾರ್ಯಕ್ರಮದಲ್ಲಿ ‘ಮಕ್ಕಳ ಜಾಗೃತಿ’ ಸದಸ್ಯರು ಪಾಲ್ಗೊಂಡಿದ್ದರು.
‘ಸಹಭಾಗಿತ್ವದ ಸಂಭ್ರಮ’ ಕಾರ್ಯಕ್ರಮದಲ್ಲಿ ‘ಮಕ್ಕಳ ಜಾಗೃತಿ’ ಸದಸ್ಯರು ಪಾಲ್ಗೊಂಡಿದ್ದರು.   

ಬೆಂಗಳೂರು: ಅಂಗನವಾಡಿಗಳನ್ನು ಗುಣಮಟ್ಟದ ಬಾಲ್ಯ ಶಿಕ್ಷಣದ ಕೇಂದ್ರಗಳಾಗಿ ರೂಪಾಂತರಿಸಿದ ಸಂಭ್ರಮಾಚರಣೆ ‘ಸಹಭಾಗಿತ್ವದ ಸಂಭ್ರಮ’ವನ್ನು ಮಕ್ಕಳ ಜಾಗೃತಿ ಸಂಸ್ಥೆ ಮತ್ತು ಬಾಷ್‌ ಸಂಸ್ಥೆಗಳು ಶುಕ್ರವಾರ ಹಮ್ಮಿಕೊಂಡವು.

ಮಕ್ಕಳ ಜಾಗೃತಿ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಬೆಂಬಲದೊಂದಿಗೆ ಮೂರು ವರ್ಷಗಳ ಪ್ರಯತ್ನದಿಂದಾಗಿ ಕೋರಮಂಗಲ ಮತ್ತು ಆಡುಗೋಡಿಯಲ್ಲಿರುವ 48 ಅಂಗನವಾಡಿಗಳಲ್ಲಿ 1,000ಕ್ಕೂ ಹೆಚ್ಚು ಮಕ್ಕಳು ಈಗ ಗುಣಮಟ್ಟದ ಅಂಗನವಾಡಿ ಕೇಂದ್ರಗಳಲ್ಲಿ ಕಲಿಯುವಂತಾಗಿದೆ ಎಂದು ಸಂಘಟಕರು ತಿಳಿಸಿದರು.

ಮಕ್ಕಳ ಜಾಗೃತಿಯು ಎಲ್ಲ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣ ಪದ್ಧತಿಗಳನ್ನು ಬಲಪಡಿಸಲು ಐಸಿಡಿಎಸ್ ಪರಿಸರ ವ್ಯವಸ್ಥೆಯೊಳಗೆ ಕೆಲಸ ಮಾಡಿದೆ. ಮಕ್ಕಳ ಕೇಂದ್ರಿತ ತರಗತಿ ಕೊಠಡಿಗಳನ್ನು ಸಕ್ರಿಯಗೊಳಿಸುವುದು. ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ನೀಡುವಲ್ಲಿ ಶಿಕ್ಷಕರನ್ನು ಬೆಂಬಲಿಸುವುದು. ಮಗುವಿನ ಅಭಿವೃದ್ಧಿಯಲ್ಲಿ ಪೋಷಕರ ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿತ್ತು ಎಂದು ಮಾಹಿತಿ ನೀಡಿದರು.

ADVERTISEMENT

ಮಕ್ಕಳ ಜಾಗೃತಿಯ ಸಿಇಒ ಸುನಯನ ಛತ್ರಪತಿ, ಉಪ ನಿರ್ದೇಶಕಿ ಅಮೃತಾ ಮುರಳಿ, ಉಪ ವ್ಯವಸ್ಥಾಪಕಿ (ಉಪ ವ್ಯವಸ್ಥಾಪಕಿ) ಅಶ್ವಿನಿ ಬಿ. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.