ADVERTISEMENT

ಮಲಬಾರ್‌ ಗೋಲ್ಡ್‌: ಕಲಾತ್ಮಕ ಆಭರಣಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 1:55 IST
Last Updated 10 ಅಕ್ಟೋಬರ್ 2021, 1:55 IST
ನಟಿ ಆದಿತಿ ಪ್ರಭುದೇವ ಅವರ ಜೊತೆ ಆಭರಣ ಪ್ರದರ್ಶಿಸಿದ ರೂಪದರ್ಶಿಗಳು
ನಟಿ ಆದಿತಿ ಪ್ರಭುದೇವ ಅವರ ಜೊತೆ ಆಭರಣ ಪ್ರದರ್ಶಿಸಿದ ರೂಪದರ್ಶಿಗಳು   

ಬೆಂಗಳೂರು: ‘ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌’ನ ಕಲಾತ್ಮಕ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ನಟಿ ಆದಿತಿ ಪ್ರಭುದೇವ ಅವರು ಜಯನಗರ ಮತ್ತು ರಾಜಾಜಿನಗರ ಷೋ ರೂಮ್‌ಗಳಲ್ಲಿ ಶನಿವಾರ ಚಾಲನೆ ನೀಡಿದರು.

ಪರಿಣತಿ ಪಡೆದ ಕುಶಲಕರ್ಮಿಗಳಿಂದ ಈ ಆಭರಣಗಳನ್ನು ತಯಾರಿಸಲಾಗಿದೆ. ಪ್ರತಿ ಆಭರಣವು ವಿಶೇಷ ಆಕರ್ಷಣೆ ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.

‘ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌’ನ ವಿವಿಧ ಬ್ರ್ಯಾಂಡೆಡ್‌ ಆಭರಣಗಳು ಇಲ್ಲಿ ಲಭ್ಯ. ಹಬ್ಬದ ನಿಮಿತ್ತ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಪ್ರತಿಯೊಂದು ವಜ್ರದ ಆಭರಣಗಳು ಮತ್ತು ಮುತ್ತು ರತ್ನಗಳ ಖರೀದಿ ಜತೆಗೆ ₹50 ಸಾವಿರ ಮೌಲ್ಯದ ಚಿನ್ನದ ನಾಣ್ಯದ ಕೊಡುಗೆ ನೀಡಲಾಗುವುದು. ಅಕ್ಟೋಬರ್‌ 17ರವರೆಗೆ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.