ADVERTISEMENT

ಬೆಂಗಳೂರು: ಲುಲ್ ಮಾಲ್‌ನಲ್ಲಿ ಯುವತಿ ಜತೆ ವ್ಯಕ್ತಿ ಅಸಭ್ಯ ವರ್ತನೆ, ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 15:51 IST
Last Updated 1 ನವೆಂಬರ್ 2023, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜಾಜಿನಗರದ ಪ್ರವೇಶದ್ವಾರದ ಬಳಿಯ ಲುಲ್‌ ಮಾಲ್‌ನಲ್ಲಿ ಕಳೆದ ವಾರ ಯುವತಿಗೆ ಡಿಕ್ಕಿ ಹೊಡೆದು ಅಸಭ್ಯ ವರ್ತನೆ ತೋರಿದ್ದ ವ್ಯಕ್ತಿಯ ಪತ್ತೆಗೆ ಮಾಗಡಿ ರೋಡ್‌ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮಾಲ್‌ ಆಡಳಿತ ಮಂಡಳಿ ವ್ಯಕ್ತಿಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ADVERTISEMENT

‘ಆತ ನಿವೃತ್ತ ಶಿಕ್ಷಕ. ಬಸವೇಶ್ವರ ನಗರದಲ್ಲಿ ನೆಲೆಸಿದ್ದಾರೆ’ ಎಂಬ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಆ ಮನೆಯಲ್ಲಿ ಯಾರೂ ಇರಲಿಲ್ಲ. ಬೀಗ ಹಾಕಲಾಗಿತ್ತು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಆ ವ್ಯಕ್ತಿ ಮಾಲ್‌ನಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಿಲ್ಲ. ಯಾವುದಾದರೂ ವಸ್ತು ಖರೀದಿಸಿದ್ದರೆ ಮೊಬೈಲ್ ಸಂಖ್ಯೆ ನೀಡುವ ಸಾಧ್ಯತೆಯಿತ್ತು. ಬೈಕ್‌ನಲ್ಲೂ ಬಂದಿರಲಿಲ್ಲ. ನಡೆದೇ ಬಂದಿದ್ದರು. ಎಲ್ಲ ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಅ.29ರಂದು ಲುಲು ಮಾಲ್‌ನಲ್ಲಿ ಯುವತಿಗೆ ಡಿಕ್ಕಿ ಹೊಡೆದು ಅಸಭ್ಯವಾಗಿ ವರ್ತನೆ ಮಾಡಿದ್ದ. ಅದೇ ಮಾಲ್‌ಗೆ ಕುಟುಂಬಸ್ಥರ ಜೊತೆಗೆ ಬಂದಿದ್ದ ಯಶವಂತ್‌ ಎಂಬುವರು ಆ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಮಾಧ್ಯಮಕ್ಕೆ ಹಾಕಿ ಕ್ರಮಕ್ಕೆ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.