ADVERTISEMENT

ವಿಧಾನಸಭೆಯಲ್ಲಿ ಮಂಗಳೂರು ಗೋಲಿಬಾರ್ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 8:57 IST
Last Updated 19 ಫೆಬ್ರುವರಿ 2020, 8:57 IST
ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ   

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿಪ್ರತಿಭಟಿಸುತ್ತಿದ್ದವರ ಮೇಲೆ ಗೋಲಿಬಾರ್ ನಡೆಸಿದ ಕ್ರಮವನ್ನು ವಿಧಾನಸಭೆಯಲ್ಲಿ ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿದರು.

‘ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳೇ ನಿಂತು ಗೋಲಿಬಾರ್ ಮಾಡಿಸಿದ್ದಾರೆ. 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಹೇರಿದ್ದಾರೆ.ಸತ್ತವರಿಗೆ ಪರಿಹಾರ ಕೊಡಲು ಆಗಲ್ಲ ಎಂದರು’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುವಶಾಲೆಯಲ್ಲಿಬಾಬ್ರಿ ಮಸೀದಿ ಕೆಡವುವ ನಾಟಕಪ್ರದರ್ಶನ ನಡೆದಿತ್ತು. ಅದರೆ ಯಾರ ಮೇಲೆಯೂ ಪ್ರಕರಣ ದಾಖಲಾಗಲಿಲ್ಲ.ಗೋಲಿಬಾರ್ ಮಾಡಿದರೆ ಮುಸ್ಲಿಮರಸಂಖ್ಯೆ ಕಡಿಮೆ ಆಗುತ್ತದೆ ಎಂದು ಮತ್ತೊಬ್ಬರು ಹೇಳಿದರು. ಆಗಲೂ ಪ್ರಕರಣ ದಾಖಲಾಗಲಿಲ್ಲ. ಬೀದರ್ ಶಾಲೆಯಲ್ಲಿ ಮಾತ್ರ ಶಿಕ್ಷಕಿಯನ್ನು ಬಂಧಿಸಿದರು. ಇದು ಅರಾಜಕತೆ ಅಲ್ಲದೆ ಇನ್ನೇನು’ ಎಂದುಪ್ರಶ್ನಿಸಿದರು.

ADVERTISEMENT

‘ಈ ಬಗ್ಗೆನ್ಯಾಯಾಂಗ ತನಿಖೆ ಆಗಬೇಕು. ತಪ್ಪಿತಸ್ಥ ಪೊಲೀಸರನ್ನು ಜೈಲಿಗೆ ಹಾಕಬೇಕು.ಇದರ ಜವಾಬ್ದಾರಿ ಸರ್ಕಾರ ಹೊರಬೇಕು’ ಎಂದು ಆಗ್ರಹಿಸಿದರು.

ಅಮಾಯಕರ ವಿರುದ್ಧ ಕ್ರಮ: ಕುಮಾರಸ್ವಾಮಿ ಟೀಕೆ

ರಾಜ್ಯದ ವಿವಿಧೆಡೆ ನಡೆದ ಪ್ರತಿಭಟನೆಗಳನ್ನು ನಿರ್ವಹಿಸುವಲ್ಲಿ ಸರ್ಕಾರ ಎಡವಿರುವ ಮಾಹಿತಿಯನ್ನು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ಬಿಚ್ಚಿಟ್ಟರು.

‘ಕಲಬುರ್ಗಿಯಲ್ಲಿ ಪ್ರತಿಭಟನೆ ಆದಾಗಗಲಾಟೆ ಆಗಲಿಲ್ಲ. ಆದರೂ ಪತ್ರಿಭಟನೆ ಮಾಡಿದವರನ್ನು ಠಾಣೆಯಲ್ಲಿ ಕೂರಿಸಿಕೊಂಡರು. ವಿಡಿಯೊ ಸಂವಾದದ ಮೂಲಕಗೃಹ ಸಚಿವರ ಗಮನಕ್ಕೆ ತರಲಾಯಿತು. ರಾತ್ರಿ 8.30ರವರೆಗೂವಿಡಿಯೊ ಸಂವಾದ ನಡೆಯಿತು. ಪ್ರತಿಭಟನಾ ರ್‍ಯಾಲಿ ಸಂದರ್ಭ ಗೋಲಿಬಾರ್ ಆಗಲು ಕಾರಣವೇನು? ಬಲವಂತವಾಗಿ ವಾಹನಕ್ಕೆ ಪೊಲೀಸರು ತುಂಬಿದ್ದು ಏಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.