ADVERTISEMENT

ಇದೇ 5ಕ್ಕೆ ಮಸೀದಿ ದರ್ಶನಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 22:26 IST
Last Updated 3 ನವೆಂಬರ್ 2022, 22:26 IST
   

ಬೆಂಗಳೂರು: ಸಮಾಜದಲ್ಲಿರುವ ಸೌಹಾರ್ದ, ಸಹಬಾಳ್ವೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ಪರಸ್ಪರರಲ್ಲಿ ಮೂಡಿಸಿರುವ ಅಪನಂಬಿಕೆ, ಪೂರ್ವಾಗ್ರಹಗಳನ್ನು ದೂರ ಮಾಡಲು ಇದೇ 5ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಮಸ್ಜಿದ್–ಎ–ಖಾದರಿಯಾದಲ್ಲಿ 'ಮಸೀದಿ ದರ್ಶನ' ಕಾರ್ಯಕ್ರಮ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಜುಮಾ ಮಸೀದಿ ಟ್ರಸ್ಟ್ ಬೋರ್ಡ್ ಆಡಳಿತ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಶರೀಫ್ ಅವರು,ಎಲ್ಲ‌ ಧರ್ಮದ ಮಹಳೆಯರು ಮತ್ತು ಪುರುಷರು ಮಸೀದಿಯೊಳಗೆ ಬಂದು ಪ್ರಾರ್ಥನೆಯನ್ನು ವೀಕ್ಷಿಸಬಹುದು ಎಂದು ಹೇಳಿದರು.

ಸಂಜೆ 4ರಿಂದ ರಾತ್ರಿ 8 ಗಂಟೆಯವರೆಗೆ ಈ ಅವಕಾಶ ಇರುತ್ತದೆ. ಜನರ ಮಧ್ಯೆ ಮೂಡಿಸಿರುವ ಅಪನಂಬಿಕೆ, ಸಂದೇಹಗಳನ್ನು ದೂರ ಮಾಡುವುದು ಕಾಲದ ಅನಿವಾರ್ಯ ಬೇಡಿಕೆಯಾಗಿದೆ. ಪರಸ್ಪರ ಅರಿವು ನಮ್ಮಲ್ಲಿ ಸೌಹಾರ್ದವನ್ನು ಗಟ್ಟಿಗೊಳಿಸುತ್ತದೆ ಎಂಬ ನಂಬುಗೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಕೆಲ ಕ್ಷೇತ್ರಗಳನ್ನು ನಿಗೂಢವಾಗಿಯೇ ಇಟ್ಟರೆ, ಅವು ಜನರಲ್ಲಿನ ಸಾಮರಸ್ಯವನ್ನು ಒಡೆಯುವ ಪಿತೂರಿ ನಡೆಸುವವರಿಗೆ ಸಹಕಾರಿಯಾಗುತ್ತವೆ. ಅದನ್ನು ಹೋಗ ಲಾಡಿಸಲು, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂದೇಹಗಳ ಗೋಡೆಗಳನ್ನು ಕೆಡವಿ ಹೃದಯಗಳನ್ನು ಬೆಸೆಯುವ ಪ್ರಯತ್ನ ನಮ್ಮದಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ನವಾಝ್, ಫಿರೋಝ್ ಖಾನ್, ಅಫ್ಸರ್ ಅಹ್ಮದ್, ನವೀದ್ ಇರ್ಫಾನ್, ತೌಸೀಫ್ ಅಹ್ಮದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.