ADVERTISEMENT

ಮಾಸ್ಕ್‌ ಧರಿಸದವರಿಂದ ₹98 ಸಾವಿರ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 4 ಮೇ 2020, 3:25 IST
Last Updated 4 ಮೇ 2020, 3:25 IST
   

ಬೆಂಗಳೂರು: ಮುಖಗವಸು ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದ ವ್ಯಕ್ತಿಗಳಿಂದ ಬಿಬಿಎಂಪಿಯು ಭಾನುವಾರ ₹98,350 ದಂಡವನ್ನು ವಸೂಲಿ ಮಾಡಿದೆ.

ಮುಖಗವಸು ಧರಿಸುವುದನ್ನು ಕಡ್ಡಾಯ ಮಾಡಿದ್ದರೂ ಇದನ್ನು ಪಾಲಿಸದ 190 ವ್ಯಕ್ತಿಗಳಿಂದ ಈ ಮೊತ್ತದ ದಂಡವನ್ನು ಬಿಬಿಎಂಪಿ ಮಾರ್ಷಲ್‌ಗಳು ವಸೂಲಿ ಮಾಡಿದ್ದಾರೆ.

ಮುಖಗವಸು ಧರಿಸುವುದನ್ನು ಕಡ್ಡಾಯ ಮಾಡಿರುವ ಬಿಬಿಎಂಪಿ, ಮೊದಲ ಸಲ ಉಲ್ಲಂಘನೆಗೆ ₹1,000, ಎರಡನೇ ಬಾರಿ ಉಲ್ಲಂಘನೆಗೆ ₹2,000 ದಂಡ ವಸೂಲಿ ಮಾಡುವುದಾಗಿ ಏಪ್ರಿಲ್‌ 30ರಂದು ಅಧಿಸೂಚನೆ ಹೊರಡಿಸಿತ್ತು.

ADVERTISEMENT

ಅಂತರ ಜಿಲ್ಲಾ ಸಂಚಾರ ಆನ್‌ಲೈನ್ ಮೂಲಕ ಪಾಸ್
ಲಾಕ್‌ಡೌನ್‌ನಿಂದಾಗಿ ಆಯಾ ಜಿಲ್ಲೆಗಳಲ್ಲಿ ಸಿಲುಕಿರುವವರ ಅನುಕೂಲಕ್ಕಾಗಿ ‘ಒನ್ ಟೈಂ’ ಪಾಸ್‌ ನೀಡಲಾಗುತ್ತಿದ್ದು, ಅರ್ಹರಿಗೆ ಆನ್‌ಲೈನ್ ಮೂಲಕವೇ ಪಾಸ್‌ ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ‘ಅಂತರ ಜಿಲ್ಲೆಗಳಲ್ಲಿ ಸಂಚಾರಕ್ಕೆ ಒಂದು ದಿನದ, ಒಂದು ಕಡೆಯ ಹಾಗೂ ಒಂದು ಅವಧಿಯ ಪಾಸ್‌ ನೀಡಲಾಗುತ್ತಿದೆ. ಇದಕ್ಕಾಗಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ
ಇ–ಪಾಸ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ’ ಎಂದಿದ್ದಾರೆ.

‘ಅರ್ಹರ ವೈಯಕ್ತಿಕ ವಿವರ ಹಾಗೂ ದಾಖಲೆ ಪರಿಶೀಲಿಸಿ ಪಾಸ್‌ ನೀಡಲಾಗುವುದು. ಇ–ಪಾಸ್ ವ್ಯವಸ್ಥೆಯ ಜಾಲತಾಣದ ಲಿಂಕ್‌ನ್ನುಭಾನುವಾರ ತಡರಾತ್ರಿ ಬಹಿರಂಗಪಡಿಸಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.