ADVERTISEMENT

ಬೆಂಗಳೂರು: ಏಪ್ರಿಲ್‌ 27ರಿಂದ ಮೇ 3ರವರೆಗೆ ಮೆಮು ರೈಲು ಭಾಗಶಃ ರದ್ದು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 16:29 IST
Last Updated 21 ಏಪ್ರಿಲ್ 2025, 16:29 IST
ಮೆಮು ರೈಲು (ಸಾಂದರ್ಭಿಕ ಚಿತ್ರ)
ಮೆಮು ರೈಲು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ವೈಟ್‌ಫೀಲ್ಡ್‌, ದೇವನಗೊಂದಿ ರೈಲು ನಿಲ್ದಾಣಗಳ ನಡುವೆ ನಿರ್ವಹಣೆ ಮತ್ತು ಹಳಿ ಜೋಡಣೆ ಕಾಮಗಾರಿ ಹಮ್ಮಿಕೊಳ್ಳಲು ಏಪ್ರಿಲ್‌ 27ರಿಂದ ಮೇ 3ರವರೆಗೆ ಮೆಮು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ.

ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ರೈಲು ಬಂಗಾರಪೇಟೆವರೆಗೆ ಮಾತ್ರ ಸಂಚರಿಸಲಿದೆ. ಮಾರಿಕುಪ್ಪಂಗೆ ತೆರಳುವುದಿಲ್ಲ. ಮಾರಿಕುಪ್ಪಂ-ಕೃಷ್ಣರಾಜಪುರ ಮೆಮು ರೈಲು ಮಾರಿಕುಪ್ಪಂನಿಂದ ಹೊರಡುವ ಬದಲು ಬಂಗಾರಪೇಟೆಯಿಂದ ನಿಗದಿತ ನಿರ್ಗಮನ ಸಮಯದಲ್ಲಿ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಮಾರಿಕುಪ್ಪಂ ಮತ್ತು ಬಂಗಾರಪೇಟೆ ನಡುವೆ ಈ ರೈಲಿನ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ಬದಲಾವಣೆ: ಚನ್ನಸಂದ್ರ ನಿಲ್ದಾಣದ ಯಾರ್ಡ್ ಬಳಿ ರೈಲ್ವೆ ಹಳಿಗಳ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಕೆಎಸ್ಆರ್ ಬೆಂಗಳೂರು-ನಾಂದೇಡ್ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ಬದಲಾವಣೆ ಉಂಟಾಗಲಿದೆ.

ADVERTISEMENT

ಏಪ್ರಿಲ್ 24, 25, 28, 30 ಹಾಗೂ ಮೇ 1 ಕೆಎಸ್ಆರ್ ಬೆಂಗಳೂರಿನಿಂದ ನಿಗದಿತ ಸಮಯಕ್ಕಿಂತ 45 ನಿಮಿಷ ತಡವಾಗಿ ಪ್ರಯಾಣ ಆರಂಭಗೊಳ್ಳಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸುವುದರಿಂದ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.