ADVERTISEMENT

ಡಿಜಿಟಲ್ ಗ್ರಂಥಾಲಯಕ್ಕೆ ದಾಖಲೆಯ ಓದುಗರು

5 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ: ಸಚಿವ ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 23:16 IST
Last Updated 24 ಸೆಪ್ಟೆಂಬರ್ 2020, 23:16 IST
ಎಸ್. ಸುರೇಶ್‌ಕುಮಾರ್ 
ಎಸ್. ಸುರೇಶ್‌ಕುಮಾರ್    

ಬೆಂಗಳೂರು: ‘ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯ ಗ್ರಂಥಾಲಯ ಇಲಾಖೆ ಅನುಷ್ಠಾನಗೊಳಿಸಿದ ಡಿಜಿಟಲ್ ಗ್ರಂಥಾಲಯ ಯೋಜನೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

‘ಸಾರ್ವಜನಿಕರಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಾರ್ವಜನಿಕ ಗ್ರಂಥಾಲಯಗಳನ್ನು ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯದೊಂದಿಗೆ ಆಧುನೀಕರಿಸುವ ಯೋಜನೆ ಹಮ್ಮಿಕೊಂಡಿದೆ. ದಾಖಲೆ ಮಟ್ಟದಲ್ಲಿ ಡಿಜಿಟಲ್‌ ಓದುಗರು ಹೆಸರನ್ನು ನೋಂದಾಯಿಸಿಕೊಂಡು, ಇದರ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯದ 26 ನಗರ ಕೇಂದ್ರ, 30 ಜಿಲ್ಲೆ, 216 ತಾಲ್ಲೂಕು ಗ್ರಂಥಾಲಯಗಳು ಸೇರಿ ಒಟ್ಟು 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪ್ರಥಮ ಹಂತವಾಗಿ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಡಿಜಿಟಲ್ ಗ್ರಂಥಾಲಯವನ್ನು ಮೊಬೈಲ್ ಮೂಲಕ ವೀಕ್ಷಿಸಲು e-sarvajanikagranthalaya ಆ್ಯಪ್ ಅನ್ನು ಸಾರ್ವಜನಿಕ
ಸೇವೆಗೆ ಒದಗಿಸಲಾಗಿದೆ. ವಿವಿಧ ಜಾಲತಾಣಗಳ ಲಿಂಕ್‌ಗಳು ಇದರಲ್ಲಿವೆ’ ಎಂದು ಅವರು ಹೇಳಿದ್ದಾರೆ.

ಡಿಜಿಟಲ್ ಗ್ರಂಥಾಲಯದಲ್ಲಿ ಏನೇನಿದೆ ?

* ಶೈಕ್ಷಣಿಕ ಮತ್ತು ಕಲಿಕೆಗೆ ಅಗತ್ಯವಿರುವ ಎಲ್ಲ ಪುಸ್ತಕಗಳು

* ಏಳು ಭಾಷೆಗಳಲ್ಲಿ ವಿಷಯವಾರು ಇ–ಕಂಟೆಟ್

* ರಾಜ್ಯ–ಸಿಬಿಎಸ್ಇಯ ಪಠ್ಯಕ್ರಮದ ಪುಸ್ತಕಗಳು

* ಕಲೆ, ಮಾನವೀಯ, ವ್ಯಕ್ತಿತ್ವ ವಿಕಸನದ ಪುಸ್ತಕಗಳು

* 1ರಿಂದ 12ನೇ ತರಗತಿಯ ಪಠ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೊಗಳು

* ‌ ಕನ್ನಡದ 4,200ಕ್ಕೂ ಹೆಚ್ಚು ಇ–ಪುಸ್ತಕ, 600 ವಿಡಿಯೊ

* ಕನ್ನಡ–ಇಂಗ್ಲಿಷ್‌ ದಿನಪತ್ರಿಕೆಗಳ ಲಿಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.