ADVERTISEMENT

ಬೆಂಗಳೂರು: ನಿಶಾಲಿಗೆ ಪ್ರೈಡ್ ಆಫ್ ಇಂಡಿಯಾ ಗರಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 15:48 IST
Last Updated 24 ಸೆಪ್ಟೆಂಬರ್ 2025, 15:48 IST
ನಿಶಾಲಿ
ನಿಶಾಲಿ   

ಬೆಂಗಳೂರು: ದೆಹಲಿಯ ಪ್ರತಿಷ್ಠಿತ ಡಿ ಕೆ ಪೆಜೆನ್ಟ್ ಸಂಸ್ಥೆಯವರು ಆಯೋಜಿಸಿದ್ದ ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ– 2025 ಕಿರೀಟವು ಕುಂದಾಪುರದ ನಿಶಾಲಿ ಅವರ ಮುಡಿಗೇರಿದೆ.

ದೇಶದ ವಿವಿಧ ಭಾಗಗಳಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಂದಿದ್ದ 44 ಸ್ಪರ್ಧಿಗಳನ್ನು ಎದುರಿಸಿ ನಿಶಾಲಿ ಅವರು ಈ ಪ್ರತಿಷ್ಠಿತ ಟೈಟಲ್‌ ತಮ್ಮದಾಗಿಸಿಕೊಂಡರು. ನಿಶಾಲಿ ಟ್ಯಾಲೆಂಟ್ ಸುತ್ತಿನಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದರು.

'ಕುಂದಾಪುರದ ಬರೆಕಟ್ಟುನಿಂದ ದೆಹಲಿಯವರೆಗಿನ ಈ ಪಯಣವು ನನ್ನ ಜೀವಮಾನದ ಕನಸನ್ನು ನನಸಾಗಿಸಿದೆ' ಎಂದು ನಿಶಾಲಿ ಸಂತಸ ಹಂಚಿಕೊಂಡರು.

ADVERTISEMENT

ಮಂಗಳೂರಿನ‌ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಎಂ.ಎ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿರುವ ನಿಶಾಲಿ, ಬೆಂಗಳೂರಿನ ಶ್ರೀನಿಧಿ ಕಾರ್ಪೋರೇಷನ್ ಸಂಸ್ಥೆಯ ಆಡಳಿತ ನಿರ್ದೇಶಕ ಉಮೇಶ್ ಕುಂದರ್ ಮತ್ತು ಜಾನಕಿ ಅವರ ಪುತ್ರಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.