ADVERTISEMENT

ಕ್ರಿಸ್‌ಮಸ್ ಪ್ರಯುಕ್ತ 10 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 15:25 IST
Last Updated 23 ಡಿಸೆಂಬರ್ 2025, 15:25 IST
ಪುಲಿಕೇಶಿ ನಗರದ ಶಾಸಕ ಎ.ಸಿ. ಶ್ರೀನಿವಾಸ್ ಅವರು ಬಡ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು. 
ಪುಲಿಕೇಶಿ ನಗರದ ಶಾಸಕ ಎ.ಸಿ. ಶ್ರೀನಿವಾಸ್ ಅವರು ಬಡ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು.    

ಬೆಂಗಳೂರು: ಪುಲಕೇಶಿನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಸಿ. ಶ್ರೀನಿವಾಸ್ ಅವರು ಕ್ರಿಸ್‌ಮಸ್‌ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ 10 ಸಾವಿರ ಕುಟುಂಬಗಳಿಗೆ ಪೆರಿಯಾರ್ ನಗರದ ಪುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ದಿನಸಿ ಕಿಟ್‌ಗಳನ್ನು ವಿತರಿಸಿದರು.

‘ಕೂಲಿ ಕಾರ್ಮಿಕರು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ನೆಮ್ಮದಿಯಿಂದ ಹಬ್ಬ ಆಚರಿಸಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶ. ಕುಡಿಯುವ ನೀರಿನ ವ್ಯವಸ್ದೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ ₹ 800 ಕೋಟಿ ವೆಚ್ಚದ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ’ ಶ್ರೀನಿವಾಸ್‌ ಎಂದು ಮಾಹಿತಿ ನೀಡಿದರು.

ಹೋಲಿಗೋಸ್ಟ್ ಚರ್ಚ್‌ನ ಫಾದರ್ ಚಲುವಮುತ್ತು ಮಾತನಾಡಿ, ‘ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ಸಾಮಾಜಿಕ ಕಟ್ಟಳೆಗಳನ್ನು ಮೀರಿ ಎಲ್ಲರೂ ಸೌಹಾರ್ದದಿಂದ ಜೀವನ ನಡೆಸಬೇಕು. ಹಸಿದವರಿಗೆ ಅನ್ನ, ನೀರು, ಅಕ್ಷರ ಮತ್ತು ಸಂಸ್ಕಾರ ನೀಡುವವರೇ ನಿಜವಾದ ಜನನಾಯಕರು’ ಎಂದರು.

ADVERTISEMENT

ಕಾಂಗ್ರೆಸ್ ಮುಖಂಡರಾದ ಅಬ್ದುಲ್ ವಾಜಿದ್, ಪ್ರೊ. ಎಂ.ವಿ.ರಾಜೀವ್ ಗೌಡ, ಜಾಕೀರ್, ಎ. ಸಿ. ಹರಿಪ್ರಸಾದ್, ಮುಜಾಹಿದ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.