ADVERTISEMENT

ವನಮಹೋತ್ಸವಕ್ಕೆ ಶಾಸಕ ಕೃಷ್ಣ ಬೈರೇಗೌಡ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 19:31 IST
Last Updated 31 ಜುಲೈ 2021, 19:31 IST
ಹುಣಸಮಾರನಹಳ್ಳಿ ಕೆರೆಯ ಅಂಗಳದಲ್ಲಿ ಶಾಸಕ ಕೃಷ್ಣಬೈರೇಗೌಡ ಸಸಿ ನೆಟ್ಟರು. ಸ್ಥಳೀಯ ಮುಖಂಡರು ಇದ್ದರು.     
ಹುಣಸಮಾರನಹಳ್ಳಿ ಕೆರೆಯ ಅಂಗಳದಲ್ಲಿ ಶಾಸಕ ಕೃಷ್ಣಬೈರೇಗೌಡ ಸಸಿ ನೆಟ್ಟರು. ಸ್ಥಳೀಯ ಮುಖಂಡರು ಇದ್ದರು.        

ಯಲಹಂಕ: ಹುಣಸಮಾರನಹಳ್ಳಿ ಕೆರೆಯನ್ನು ಸಾರ್ವಜನಿಕರಿಗೆ ಸಮರ್ಪಣೆ ಮಾಡುವ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಕೃಷ್ಣ ಬೈರೇಗೌಡ ಚಾಲನೆ ನೀಡಿದರು.

ಬಳಿಕಮಾತನಾಡಿದ ಅವರು,‘ಈ ಜಾಗದಲ್ಲಿ ಅನುಪಯುಕ್ತ ಗಿಡಗಳು ಮತ್ತು ಪೊದೆಗಳು ಬೆಳೆದುಕೊಂಡು, ಪಾಳುಬಿದ್ದ ಪ್ರದೇಶವಾಗಿತ್ತು. ಕೆರೆ ಅಂಗಳದ ಜಾಗವನ್ನು ಸಮತಟ್ಟು ಮಾಡಿ, ಕಳೆ ತೆರವುಗೊಳಿಸಲಾಯಿತು. ಸಣ್ಣ ನೀರಾವರಿ ಇಲಾಖೆಯಿಂದ ₹30 ಲಕ್ಷ ವೆಚ್ಛದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದೆ’ ಎಂದರು.

‘ಕೆರೆಯ ಸುತ್ತ ನಡಿಗೆ ಪಥ ನಿರ್ಮಿಸಲಾಗಿದೆ. ಕಿರು ಉದ್ಯಾನ ಅಭಿವೃದ್ಧಿಪಡಿಸಿ, ಗಿಡ ನೆಡಬೇಕೆಂದು ಐಟಿಸಿ ಕಂಪನಿಯವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಅವರು ₹25 ಲಕ್ಷ ಮಂಜೂರು ಮಾಡಿದರು. ಸುಮಾರು 900 ಗಿಡಗಳನ್ನು ನೆಟ್ಟು, ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿರುವುದು ಶ್ಲಾಘನೀಯ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.