ಮೊಬೈಲ್( ಸಾಂದರ್ಭಿಕ ಚಿತ್ರ)
ಬೆಂಗಳೂರು: ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡು ಯುವಕನ ತೊಡೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ.
ವೈಟ್‌ಫೀಲ್ಡ್ ನಿವಾಸಿ ಪ್ರಸಾದ್ ಗಾಯಗೊಂಡ ಯುವಕ.
‘ವೈಟ್ಫೀಲ್ಡ್ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್ ಅಕ್ಟೋಬರ್‌ನಲ್ಲಿ ಹೊಸ ಮೊಬೈಲ್ ಖರೀದಿಸಿದ್ದರು. ಬುಧವಾರ, ಸ್ಕೂಟರ್‌ನಲ್ಲಿ ತೆರಳುವಾಗ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡಿದ್ದರು. ಏಕಾಏಕಿ ಬಿಸಿಯಾದ ಮೊಬೈಲ್ ಸ್ಫೋಟಗೊಂಡಿದೆ’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
‘ಘಟನೆಯ ಮಾಹಿತಿ ತಿಳಿದ ಮೊಬೈಲ್ ಮಾರಾಟ ಮಾಡಿದ್ದ ಶೋರೂಮ್‌ನವರು ವೈದ್ಯಕೀಯ ವೆಚ್ಚ ಹಾಗೂ ಹೊಸ ಮೊಬೈಲ್ ಕೊಡುವುದಾಗಿ ಭರವಸೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಅಂದಾಜು ₹4 ಲಕ್ಷ ಆಗಬಹುದು ಎಂದು ವೈದ್ಯರೂ ಹೇಳಿದ್ದಾರೆ. ಅಷ್ಟು ಮೊತ್ತವನ್ನು ನೀಡಬೇಕು’ ಎಂದು ಪ್ರಸಾದ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.