ADVERTISEMENT

ನೀರು ಸರಬರಾಜು ವ್ಯವಸ್ಥೆಯ ಆಧುನೀಕರಣ: ಸಚಿವ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 23:54 IST
Last Updated 20 ಫೆಬ್ರುವರಿ 2025, 23:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬೆಂಗಳೂರು ಜಲ ಮಂಡಳಿಯ ಸಿಎಲ್‌ಆರ್‌ (ಕ್ಲೈವ್ ಲೈನ್ಸ್‌ ರಿಸರ್‌ವಾಯರ್‌)ನಿಂದ ಜಾನ್ಸನ್‌ ಮಾರ್ಕೆಟ್‌, ದೊಮ್ಮಲೂರು, ಮಚಲಿಬೆಟ್ಟ, ಹಲಸೂರು ಸೇವಾಠಾಣೆಗಳ ಪ್ರದೇಶವಾರು ನೀರು ಸರಬರಾಜು ವ್ಯವಸ್ಥೆಗಳ ಆಧುನೀಕರಣ ಮತ್ತು ಮರು ರೂಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು  ವಿಸ್ತೃತ ಯೋಜನಾ ವರದಿ ಸಲ್ಲಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಯೋಜನೆಯ ಅಂದಾಜು ವೆಚ್ಚ ₹199 ಕೋಟಿ. ಈ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ನೀರಿನ ಸೋರಿಕೆ ಪ್ರಮಾಣವನ್ನು ಶೇ 33 ರಿಂದ ಶೇ 10 ಕ್ಕೆ ಕಡಿತಗೊಳಿಸಬಹುದು. ನೀರಿನ ಸೋರಿಕೆ ತಡೆಗಟ್ಟುವುದರಿಂದ ಆದಾಯವೂ ಹೆಚ್ಚಾಗುತ್ತದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ADVERTISEMENT

ಜಾನ್ಸನ್‌ ಮಾರ್ಕೆಟ್‌, ದೊಮ್ಮಲೂರು, ಮಚಲಿಬೆಟ್ಟ, ಹಲಸೂರು ಸೇವಾಠಾಣೆಗಳ ಉಪ ವಿಭಾಗಗಳಲ್ಲಿ ನೀರಿನ ಸೋರಿಕೆ ಹೆಚ್ಚಾಗಿದ್ದು, ನೀರು ಕಲುಷಿತವಾಗಿರುವ ದೂರುಗಳು ಬಂದಿವೆ. ಆಧುನೀಕರಣದಿಂದ ಈ ಸಮಸ್ಯೆ ನಿವಾರಣೆ ಆಗಲಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.