ADVERTISEMENT

ಡೆಂಗಿ: 9 ಸಾವಿರ ದಾಟಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:41 IST
Last Updated 13 ಜುಲೈ 2024, 15:41 IST
<div class="paragraphs"><p>ಡೆಂಗಿ &nbsp; </p></div>

ಡೆಂಗಿ  

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಶನಿವಾರ 424 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದು, ಈ ವರ್ಷ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 9 ಸಾವಿರದ ಗಡಿ (9,082) ದಾಟಿದೆ. 

ADVERTISEMENT

ಕಳೆದೊಂದು ವಾರದಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ. 24 ಗಂಟೆಗಳಲ್ಲಿ 2,557 ಪರೀಕ್ಷೆ ಮಾಡಲಾಗಿದೆ. ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ನಾಲ್ವರು ಒಂದು ವರ್ಷದೊಳಗಿನವರಾದರೆ, 168 ಮಂದಿ ಒಂದರಿಂದ 18 ವರ್ಷದವರಾಗಿದ್ದಾರೆ. 252 ಮಂದಿ 18 ವರ್ಷ ಮೇಲ್ಪಟ್ಟವರು. ಸದ್ಯ ಡೆಂಗಿ ಪೀಡಿತರಲ್ಲಿ 353 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

22 ಜಿಲ್ಲೆಗಳಲ್ಲಿ ಹೊಸದಾಗಿ ಡೆಂಗಿ ಪ್ರಕರಣಗಳು ಖಚಿತಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಮಂದಿಗೆ ಹೊಸದಾಗಿ ರೋಗ ದೃಢಪಟ್ಟಿದೆ. ಧಾರವಾಡ, ಮಂಡ್ಯ, ಹಾಸನ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ 20 ಪ್ರಕರಣಗಳು ಖಚಿತಪಟ್ಟಿವೆ. ಉಳಿದೆಡೆ ಹೊಸ ಪ್ರಕರಣಗಳ ಸಂಖ್ಯೆ ಇದಕ್ಕಿಂತ ಕಡಿಮೆಯಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.