ADVERTISEMENT

ಹೆಲಿಕಾಪ್ಟರ್‌ ಪತನ: ವರುಣ್ ಸಿಂಗ್ ಮೃತ ದೇಹ ಭೋಪಾಲ್‌ಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 21:53 IST
Last Updated 16 ಡಿಸೆಂಬರ್ 2021, 21:53 IST
ವರುಣ್ ಸಿಂಗ್ ಅವರ ಮೃತ ದೇಹಕ್ಕೆ ಅವರ ತಂದೆ ಪಿ.ಕೆ.ಸಿಂಗ್, ತಾಯಿ ಉಮಾ ಸಿಂಗ್, ಪತ್ನಿ ಗೀತಾಂಜಲಿ ಸಿಂಗ್, ಮಗಳು ಆರಾಧ್ಯ ಸಿಂಗ್ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ವರುಣ್ ಸಿಂಗ್ ಅವರ ಮೃತ ದೇಹಕ್ಕೆ ಅವರ ತಂದೆ ಪಿ.ಕೆ.ಸಿಂಗ್, ತಾಯಿ ಉಮಾ ಸಿಂಗ್, ಪತ್ನಿ ಗೀತಾಂಜಲಿ ಸಿಂಗ್, ಮಗಳು ಆರಾಧ್ಯ ಸಿಂಗ್ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ತಮಿಳುನಾಡಿನ ಕೂನೂರಿನಲ್ಲಿ ನಡೆದಿದ್ದ ವಾಯುಪಡೆ ಹೆಲಿಕಾಪ್ಟರ್‌ ಪತನದಲ್ಲಿ ಬದುಕುಳಿದು, ಬುಧವಾರ ನಿಧನರಾಗಿರುವ ಗ್ರೂಪ್‌ ಕ್ಯಾಪ್ಟನ್ ವರುಣ್ ಸಿಂಗ್ ಅವರ ಮೃತ ದೇಹವನ್ನು ಅವರ ತವರೂರಾದ ಭೋಪಾಲ್‌ಗೆ ಗುರುವಾರ ಸ್ಥಳಾಂತರಿಸಲಾಯಿತು.

ಯಲಹಂಕ ವಾಯುನೆಲೆಯಲ್ಲಿ ಮೃತ ದೇಹಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಅವರ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅಂತಿಮ ನಮನ ಸಲ್ಲಿಸಿದರು.

ವರುಣ್ ಸಿಂಗ್ ಅವರ ತಂದೆ ಕರ್ನಲ್ (ನಿವೃತ್ತ) ಕೆ.ಪಿ. ಸಿಂಗ್, ತಾಯಿ ಉಮಾಸಿಂಗ್, ಪತ್ನಿ ಗೀತಾಂಜಲಿ ಸಿಂಗ್, ಮಗ ರದ್ದುಮಾನ್ ಸಿಂಗ್ ಮತ್ತು ಮಗಳು ಆರಾಧ್ಯ ಸಿಂಗ್ ಭಾಗವಹಿಸಿದ್ದರು. ‌ನಂತರ ಮೃತದೇಹ ಹೊತ್ತ ಎಎನ್‌–32 ವಿಮಾನ ಮಧ್ಯಾಹ್ನ 12.30ರಸುಮಾರಿಗೆ ಕೆಂಪೇಗೌಡ ವಿಮಾನನಿಲ್ದಾಣದಿಂದ ಹೊರಟಿತು. ಭೋಪಾಲ್‌ನಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ ದು ಎಂದು ಕುಟುಂಬ ಸದಸ್ಯರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.