ADVERTISEMENT

ಆಗಸ್ಟ್‌ 9ರ ಬಳಿಕ ಕಾಲೇಜು ಪುನರಾರಂಭಿಸಿ: ಎಂ.ಆರ್.ದೊರೆಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 21:01 IST
Last Updated 6 ಜುಲೈ 2021, 21:01 IST
ಎಂ.ಆರ್.ದೊರೆಸ್ವಾಮಿ
ಎಂ.ಆರ್.ದೊರೆಸ್ವಾಮಿ   

ಬೆಂಗಳೂರು: ‘ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಪ್ರಕ್ರಿಯೆ ಶೀಘ್ರದಲ್ಲೇ ಮುಗಿಯಲಿದ್ದು, ಆಗಸ್ಟ್‌ 9ರ ನಂತರ ಕಾಲೇಜುಗಳ ಪುನರಾರಂಭಕ್ಕೆ ಯಾವುದೇ ಅಡಚಣೆ ಇಲ್ಲ’ ಎಂದು ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಎಂ.ಆರ್.ದೊರೆಸ್ವಾಮಿ ಸಲಹೆ ನೀಡಿದ್ದಾರೆ.

ಈ ಸಂಬಂಧ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ಜುಲೈ ಎರಡನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಮುಂದಿನ ಪ್ರವೇಶಾತಿ ಪ್ರಕ್ರಿಯೆಗೆ ಕನಿಷ್ಠ ಎರಡು ಅಥವಾ ಮೂರು ವಾರಗಳ ಕಾಲಾವಕಾಶ ನೀಡಿ, ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಆರಂಭಿಸಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

‘ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಜು.15 ರ ನಂತರ ನಡೆಸುವುದು ಸೂಕ್ತ. ಶಾಲೆಗಳ ಪುನರಾರಂಭ ಸಂಬಂಧ ಡಾ. ದೇವಿಶೆಟ್ಟಿ ನೇತೃತ್ವದ ಕಾರ್ಯಪಡೆ ಸೂಚಿಸಿರುವ ಶಿಫಾರಸುಗಳ ಅನ್ವಯ ಪ್ರಾರಂಭಿಸಬಹುದು. ಈ ಪ್ರಕ್ರಿಯೆಯನ್ನು ಇಡೀ ರಾಜ್ಯಕ್ಕೆ ಅನುಷ್ಠಾನಗೊಳಿಸುವ ಬದಲು ಆಯಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು. ಶಿಕ್ಷಣ ಸಂಸ್ಥೆಗಳೂ ಶಿಫಾರಸುಗಳನ್ನು ತಪ್ಪದೇ ಪಾಲಿಸುವುದು ಕ್ಷೇಮ’ ಎಂದೂ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.