ADVERTISEMENT

ಕಿದ್ವಾಯಿಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 23:38 IST
Last Updated 17 ಜುಲೈ 2025, 23:38 IST
<div class="paragraphs"><p>ಆಸ್ಪತ್ರೆ</p></div>

ಆಸ್ಪತ್ರೆ

   

ill

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಹಾಗೂ ಮ್ಯಾಮೋಗ್ರಾಮ್ ಯಂತ್ರ ದುರಸ್ತಿ ಕಾರ್ಯ ನಡೆಯುತ್ತಿದೆ. ಹಾಗಾಗಿ ನಿಮ್ಹಾನ್ಸ್‌ ಹಾಗೂ ಸಂಜಯ್‌ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಗಳಲ್ಲಿ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

ADVERTISEMENT

ಹೊಸ ಯಂತ್ರ ಖರೀದಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ದುರಸ್ತಿಯಲ್ಲಿರುವ ಎಂಆರ್‌ಐ (ತಾಂತ್ರಿಕ ಸಮಸ್ಯೆ) ಹಾಗೂ ಮ್ಯಾಮೋಗ್ರಾಮ್ ಯಂತ್ರ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎರಡೂ ಸ್ಕ್ಯಾನಿಂಗ್‌ಗಳು ಶೀಘ್ರದಲ್ಲಿ ರೋಗಿಗಳ ಅನುಕೂಲಕ್ಕೆ ಲಭ್ಯವಾಗಲಿವೆ. ಅಲ್ಲಿವರೆಗೆ ಎಂಆರ್‌ಐ ಸ್ಕ್ಯಾನಿಂಗ್‌ ಮಾಡಲು ನಿಮ್ಹಾನ್ಸ್ ಹಾಗೂ ಹಾಗೂ ಸಂಜಯ್‌ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.