ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ಯೋಜನೆಯ ಹಂತ–3 ರ ಸರ್ಜಾಪುರ– ಹೆಬ್ಬಾಳದವರೆಗೆ 36.59 ಕಿ.ಮೀ ದೂರದ ಕಾಮಗಾರಿಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಈ ಮಾರ್ಗದಲ್ಲಿ 17 ಮೆಟ್ರೊ ನಿಲ್ದಾಣಗಳು, 22.14 ಕಿ.ಮೀಗಳ ಎತ್ತರಿಸಿದ ಮಾರ್ಗ ಮತ್ತು 11 ನಿಲ್ದಾಣಗಳನ್ನೊಳಗೊಂಡ 14.45 ಕಿ.ಮೀ ಸುರಂಗ ಮಾರ್ಗಗಳನ್ನು ಒಳಗೊಂಡಿದೆ. ₹28,405 ಕೋಟಿ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.
ಭಾರತ ಸರ್ಕಾರ ಮೂಲಕ ಸಾವರಿನ್ ಲೋನ್/ ಪಾಸ್ ಥ್ರೂ ಅಸಿಸ್ಟೆನ್ಸ್(ಪಿಟಿಎ) ಮೂಲಕ ಸಾಲ ಪಡೆಯಲು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಸಿವಿಲ್ ಕಾಮಗಾರಿ ಆರಂಭಿಸಲು ಒಪ್ಪಿಗೆ ನೀಡಲಾಯಿತು ಎಂದು ಹೇಳಿದರು.
File Photo
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.