ನಿರೂಪಕಿ ಅಪರ್ಣಾ ವಸ್ತಾರೆ ಎಂದರೆ ಪ್ರತಿಯೊಬ್ಬ ಕನ್ನಡಿಗನಿಗೂ ಚಿರಪರಿಚಿತರು. ಬೆಂಗಳೂರಿನಲ್ಲಿ ನಮ್ಮ ಮೆಟ್ರೊದಲ್ಲಿ ಕಾಲು ಇಡುತ್ತಿದ್ದಂತೆ ಸ್ಪಷ್ಟ ಕನ್ನಡ–ಇಂಗ್ಲಿಷ್ ಭಾಷೆಯಲ್ಲಿ ಮೆಟ್ರೊ ಸೂಚನೆಗಳನ್ನು ನೀಡುವ ಮೂಲಕ ಪ್ರಯಾಣಿಕರ ಗಮನ ಸೆಳೆದಿದ್ದರು. ನೇರಳೆ ಮಾರ್ಗ, ಹಸಿರು ಮಾರ್ಗದ ಮೆಟ್ರೊಗಳಿಗೆ ಇವರೇ ಧ್ವನಿಯನ್ನು ನೀಡಿದ್ದರು.
ಅಪರ್ಣಾ ನಿಧನದ ಬಳಿಕ ಅವರ ಧ್ವನಿಯನ್ನು AI ಮೂಲಕ ಹಳದಿ ಮಾರ್ಗದ ಮೆಟ್ರೊಗಳಿಗೆ ನೀಡುವಂತೆ ಅನೇಕ ಕನ್ನಡಿಗರು ಬೇಡಿಕೆ ಇಟ್ಟಿದ್ದರು.
ಈಗ ಹಳದಿ ಮೆಟ್ರೊ ಮಾರ್ಗದಲ್ಲೂ ಕೂಡ ಅವರದ್ದೇ ಧ್ವನಿಯಲ್ಲಿ ಸೂಚನೆಗಳನ್ನು ಕೇಳಬಹುದಾಗಿದೆ. ಅದು AI ಧ್ವನಿಯಲ್ಲ ಬದಲಾಗಿ ಅವರು ನಿಧನರಾಗುವ ಕೆಲವು ತಿಂಗಳ ಹಿಂದೆ ಹಳದಿ ಮೆಟ್ರೊ ಮಾರ್ಗದ ಸೂಚನೆಗಳಿಗೆ ಧ್ವನಿ ಮುದ್ರಣ ನೀಡಿದ್ದರು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಅಪರ್ಣಾ ಅವರ ವಾಯ್ಸ್ ರೆಕಾರ್ಡಿಂಗ್ ಮಾತ್ರವಲ್ಲದೇ, ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮ, ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಪ್ಪಟ ಕನ್ನಡ ನಿರೂಪಣೆ ಮೂಲಕ ಕನ್ನಡಿಗರ ಮನ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.