ಬೆಂಗಳೂರಿನ ನಮ್ಮ ಮೆಟ್ರೊ ರಾಷ್ಟ್ರೀಯ ವಿದ್ಯಾಲಯ - ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಇಂಟರ್ ಚೇಂಜ್ ಸ್ಟೇಷನ್) ಬಳಿ ಹಳದಿ ರೈಲು ಪರೀಕ್ಷಾರ್ಥ ಸಂಚಾರ ನಡೆಸಿತ್ತು
ಪ್ರಜಾವಾಣಿ ಚಿತ್ರ: ರಂಜು ಪಿ
ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಇದೇ 10 ರಂದು ಹಳದಿ ಮಾರ್ಗದಲ್ಲಿ ಮೆಟ್ರೊ ರೈಲುಗಳ ಸಂಚಾರ ಆರಂಭವಾಗಲಿದೆ.
ಹಳದಿ ಮಾರ್ಗದಲ್ಲಿ ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್.ವಿ. ರಸ್ತೆ)–ಬೊಮ್ಮಸಂದ್ರ ನಡುವೆ ಸಂಚರಿಸಲಿರುವ ರೈಲುಗಳು ಚಾಲಕ ರಹಿತವಾಗಿರಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಆ.10 ರಂದು ಮೆಟ್ರೊ ರೈಲಿಗೆ ಚಾಲನೆ ನೀಡಲಿದ್ದಾರೆ.
ಆರಂಭದಲ್ಲಿ ಹಳದಿ ಮಾರ್ಗದಲ್ಲಿ ಮೂರು ರೈಲುಗಳು ಮಾತ್ರ ಸಂಚರಿಸಲಿವೆ.
ಹಳದಿ ಮಾರ್ಗದಲ್ಲಿ ಇರುವ ನಿಲ್ದಾಣಗಳು |
---|
ಬೊಮ್ಮಸಂದ್ರ |
ಹೆಬ್ಬಗೋಡಿ |
ಹುಸ್ಕೂರು ರಸ್ತೆ |
ಇನ್ಫೊಸಿಸ್ ಫೌಂಡೇಷನ್ (ಕೋನಪ್ಪನ ಅಗ್ರಹಾರ) |
ಎಲೆಕ್ಟ್ರಾನಿಕ್ ಸಿಟಿ |
ಬೆರಟೇನ ಅಗ್ರಹಾರ |
ಹೊಸ ರಸ್ತೆ |
ಸಿಂಗಸಂದ್ರ |
ಕೂಡ್ಲು ಗೇಟ್ |
ಹೊಂಗಸಂದ್ರ |
ಬೊಮ್ಮನಹಳ್ಳಿ |
ಸೆಂಟ್ರಲ್ ಸಿಲ್ಕ್ ಬೋರ್ಡ್ |
ಬಿಟಿಎಂ ಲೇಔಟ್ |
ಜಯದೇವ ಆಸ್ಪತ್ರೆ |
ರಾಗಿಗುಡ್ಡ |
ಆರ್.ವಿ. ರಸ್ತೆ |
ಮೆಟ್ರೊ ಹಳದಿ ಮಾರ್ಗದ ಕುರಿತು ಇನ್ನಷ್ಟು ಮಾಹಿತಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.