ADVERTISEMENT

ಪೀಣ್ಯ: ನಂದಿನಿ ಪಾರ್ಲರ್‌ ರೋಲಿಂಗ್‌ ಶಟರ್ ಬೀಗ ಒಡೆದು ₹3 ಲಕ್ಷ ನಗದು ಕಳವು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 18:13 IST
Last Updated 3 ಆಗಸ್ಟ್ 2025, 18:13 IST
ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹಣ, ಚಿನ್ನ ದರೋಡೆ
ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹಣ, ಚಿನ್ನ ದರೋಡೆ    

ಬೆಂಗಳೂರು: ಪೀಣ್ಯದ 8ನೇ ಮೈಲಿಯಲ್ಲಿರುವ ನಂದಿನಿ ಪಾರ್ಲರ್‌ ರೋಲಿಂಗ್‌ ಶಟರ್‌ ಬೀಗ ಒಡೆದು ₹3 ಲಕ್ಷ ನಗದು ಕಳ್ಳತನ ಮಾಡಲಾಗಿದೆ.

ವಿರೂಪಾಕ್ಷ ಎಂಬುವರು ಚೀಟಿ ವ್ಯವಹಾರದ ₹3 ಲಕ್ಷ ನಗದು ಅನ್ನು ತೆಗೆದುಕೊಂಡು ಬಂದು ಪಾರ್ಲರ್‌ನಲ್ಲಿ ಇಟ್ಟಿದ್ದರು. ಶನಿವಾರ ತಡರಾತ್ರಿ ಎರಡು ಬೈಕ್‌ನಲ್ಲಿ ಬಂದ ಅಪರಿಚಿತರು, ಬೀಗ ಮುರಿದು, ಹಣದೊಂದಿಗೆ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನೆಲಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ADVERTISEMENT

‘ಹಣ ತಂದಿಟ್ಟಿರುವ ವಿಚಾರ ಗೊತ್ತಿರುವವರೇ ಈ ಕೃತ್ಯವೆಸಗಿರುವ ಸಾಧ್ಯತೆ ಇದೆ. ಸಿ.ಸಿ.ಟಿ.ವಿ. ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.