ADVERTISEMENT

ಬೆಂಗಳೂರು ಸುತ್ತಮುತ್ತಲಿನ 7 ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಸಡಿಲಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 22:34 IST
Last Updated 20 ಜನವರಿ 2020, 22:34 IST
ಫಾಸ್ಟ್ಯಾಗ್‌
ಫಾಸ್ಟ್ಯಾಗ್‌    

ಬೆಂಗಳೂರು: ಭಾರಿ ಪ್ರಮಾಣದಲ್ಲಿ ವಾಹನ ದಟ್ಟಣೆ ಕಂಡುಬಂದಿರುವಬೆಂಗಳೂರು ಸುತ್ತಮುತ್ತಲಿನ ಏಳು ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಫಾಸ್ಟ್ಯಾಗ್‌ ನಿಯಮದಲ್ಲಿ ಫೆಬ್ರುವರಿ 14ರವರೆಗೆ ಸಡಿಲಿಕೆ ಮಾಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ನೀಡಿದೆ.

ಸಚಿವಾಲಯ ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗೆ ಸೂಚನೆ ರವಾನಿಸಿದ್ದು, ಟೋಲ್‌ ಕೇಂದ್ರಗಳಲ್ಲಿ 3ರಿಂದ 4 ಲೇನ್‌ಗಳನ್ನು ನಗದು ಪಡೆಯುವುದಕ್ಕೆ ಅವಕಾಶ ಕಲ್ಪಿಸಬೇಕು, ಉಳಿದ ಲೇನ್‌ಗಳಲ್ಲಿ ಫಾಸ್ಟ್ಯಾಗ್‌ ಅಳವಡಿಸಿದ ವಾಹನಗಳು ಸಂಚರಿಸುವುದಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಿದೆ.

ಕೆಂಪೇಗೌಡ ವಿಮಾನನಿಲ್ದಾಣ ಸಮೀಪದ ಸಾದಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ ಎತ್ತರಿಸಿದ ರಸ್ತೆ, ದೊಡ್ಡಕರೆನಹಳ್ಳಿ, ಹೊಸಕೋಟೆ, ಅತ್ತಿಬೆಲೆ ಗ್ರೇಡ್‌ ಸೆಕ್ಷನ್‌, ಬೆಳ್ಳೂರು ಹಾಗೂ ಬೆಂಗಳೂರು–ನೆಲಮಂಗಲ ನಡುವಿನ ಟೋಲ್‌ಗಳಲ್ಲಿ ಈ ವಿನಾಯಿತಿ ನೀಡಲಾಗಿದೆ.

ADVERTISEMENT

ದೇಶದಾದ್ಯಂತ ಸುಮಾರು 65 ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಈ ರೀತಿಯ ಭಾರಿ ವಾಹನ ದಟ್ಟಣೆ ಕಂಡುಬಂದಿದೆ. ದಟ್ಟಣೆ ಇರುವ ಉಳಿದೆಡೆ ಶೇ 25ರಷ್ಟು ಲೇನ್‌ಗಳನ್ನು ಹೈಬ್ರಿಡ್‌ ಲೇನ್‌ಗಳಾಗಿ (ನಗದು ಮತ್ತು ಫ್ಯಾಸ್ಟ್ಯಾಗ್‌) ಸದ್ಯ ಪರಿವರ್ತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.