
ಪ್ರಜಾವಾಣಿ ವಾರ್ತೆಒಂದೆಡೆ ಒಲಿಂಪಿಕ್ ಕೂಟದಲ್ಲಿ ಈಜಿ ಬಂದ ಸಾಧಕರು, ಮತ್ತೊಂದೆಡೆ ಭವಿಷ್ಯದ ಸ್ವಿಮ್ಮರ್‌ಗಳು ಸೆಣಸಿದ, ತಮ್ಮ ಸಾಮರ್ಥ್ಯ ಪ್ರದರ್ಶಿಸಿದ ನೆಟ್ಟಕಲ್ಲಪ್ಪ ಈಜು ಸ್ಪರ್ಧೆ ಭಾನುವಾರ ಮುಕ್ತಾಯಗೊಂಡಿತು. ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ನಡೆದ ನಾಲ್ಕನೇ ಆವೃತ್ತಿಯ ಈ ಸ್ಪರ್ಧೆಯಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್, ದೀನಿಧಿ ದೇಸಿಂಗು ಹಾಗೂ ತ್ರಿಷಾ ಎಸ್. ಸಿಂಧು ಅವರು ‘ಮೌಲ್ಯಯುತ ಈಜುಪಟುಗಳು’ ಗೌರವಕ್ಕೆ ಪಾತ್ರರಾದರು. ಈ ವರ್ಷದ ವಿಶೇಷವೆಂದರೆ, ಪ್ರಶಸ್ತಿಯ ಒಟ್ಟು ಮೊತ್ತವನ್ನು ₹10.50 ಲಕ್ಷಕ್ಕೆ ಏರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.