ADVERTISEMENT

ಪತ್ರಿಕಾ ವಿತರಕರಿಗೆ ಸೌಲಭ್ಯ ಕಲ್ಪಿಸಿ: ಸರ್ಕಾರಕ್ಕೆ ಆಗ್ರಹ

ವಿತರಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 22:50 IST
Last Updated 4 ಸೆಪ್ಟೆಂಬರ್ 2025, 22:50 IST
ವಿಶ್ವ ಪತ್ರಿಕಾ ವಿತರಕರ ದಿನದ ಅಂಗವಾಗಿ ವಿಜಯನಗರದಲ್ಲಿ ಕೇಕ್‌ ಕತ್ತರಿಸಿ ಆಚರಿಸಲಾಯಿತು
ವಿಶ್ವ ಪತ್ರಿಕಾ ವಿತರಕರ ದಿನದ ಅಂಗವಾಗಿ ವಿಜಯನಗರದಲ್ಲಿ ಕೇಕ್‌ ಕತ್ತರಿಸಿ ಆಚರಿಸಲಾಯಿತು   

ಬೆಂಗಳೂರು: ಪತ್ರಿಕಾ ವಿತರಕರಿಗಾಗಿ ಕ್ಷೇಮನಿಧಿ ಸ್ಥಾಪಿಸಿ ₹10 ಕೋಟಿ ಮೀಸಲಿಡಬೇಕು ಎಂದು ವಿತರಕರು ಆಗ್ರಹಿಸಿದರು.

ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ವಿಜಯನಗರ ಮತ್ತು ಮೆಜೆಸ್ಟಿಕ್‌ನಲ್ಲಿ ಕೇಕ್‌ ಕತ್ತರಿಸಿ, ಸಿಹಿ ವಿತರಿಸಲಾಯಿತು.

70 ವರ್ಷ ಆಗಿರುವ ಪತ್ರಿಕಾ ವಿತರಕರಿಗೆ ₹5 ಸಾವಿರ ಪಿಂಚಣಿ ನೀಡಬೇಕು. ವಾಯುಮಾಲಿನ್ಯ ತಡೆಗಟ್ಟಲು ರಿಯಾಯಿತಿ ಬೆಲೆಯಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಒದಗಿಸಬೇಕು. ವಿತರಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಬಡ್ಡಿ ರಹಿತ ಧನ ಸಹಾಯ ನೀಡಬೇಕು. ಸರ್ಕಾರಿ ವಸತಿ ಯೋಜನೆಗಳಲ್ಲಿ ವಿತರಕರಿಗಾಗಿ ಶೇ 25ರಷ್ಟು ಮೀಸಲು ಇಡಬೇಕು. ಪತ್ರಿಕೆ ಹಂಚುವ ಸಮಯದಲ್ಲಿ ಅಪಘಾತಕ್ಕೀಡಾದರೆ ಚಿಕಿತ್ಸಾ ವೆಚ್ಚ ಭರಿಸಬೇಕು. ಮೃತಪಟ್ಟಲ್ಲಿ ₹5 ಲಕ್ಷ ಪರಿಹಾರ ನೀಡಬೇಕು. ಇಎಸ್‌ಐ, ಇಪಿಎಫ್‌ ಒದಗಿಸಬೇಕು ಎಂದು ವಿತರಕರು ಆಗ್ರಹಿಸಿದರು.

ADVERTISEMENT

ವಿತರಕರಾದ ಎಂ.ಟಿ.ಗೋಪಾಲ್, ವಿನೋದ್ ಕುಮಾರ್, ಕೆ.ಶಂಭುಲಿಂಗ, ಮಂಜುನಾಥ್ ಎಂ.ಎಂ, ಶ್ರೀನಿವಾಸ್, ಕಾರ್ತಿಕ್, ಮುತ್ತಣ್ಣ, ಹೇಮಂತ್ ರಾಜು, ಮಲ್ಲಿಕಾರ್ಜುನ, ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.