ADVERTISEMENT

ಕೋರಮಂಗಲದಲ್ಲಿ ಎನ್‌ಐಆರ್‌ಡಿಸಿ ಪ್ರಾದೇಶಿಕ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 13:58 IST
Last Updated 26 ಜುಲೈ 2025, 13:58 IST
ಕೋರಮಂಗಲದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಎನ್‌ಐಆರ್‌ಡಿಸಿ ಪ್ರಾದೇಶಿಕ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಎನ್‌ಐಆರ್‌ಡಿಸಿ ಅಧ್ಯಕ್ಷ ಶಂಭು ಸಿಂಗ್, ಪ್ರಾದೇಶಿಕ ಅಧ್ಯಕ್ಷ ವೆಂಪಲ್ಲಿ ಅಮಾನುಲ್ಲಾ ಮತ್ತು ಐಸಿಎಲ್ ನಿರ್ದೇಶಕಿ ರಾಜಶ್ರೀ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕೋರಮಂಗಲದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಎನ್‌ಐಆರ್‌ಡಿಸಿ ಪ್ರಾದೇಶಿಕ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಎನ್‌ಐಆರ್‌ಡಿಸಿ ಅಧ್ಯಕ್ಷ ಶಂಭು ಸಿಂಗ್, ಪ್ರಾದೇಶಿಕ ಅಧ್ಯಕ್ಷ ವೆಂಪಲ್ಲಿ ಅಮಾನುಲ್ಲಾ ಮತ್ತು ಐಸಿಎಲ್ ನಿರ್ದೇಶಕಿ ರಾಜಶ್ರೀ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಕೋರಮಂಗಲದಲ್ಲಿ ಶನಿವಾರ ರಾಷ್ಟ್ರೀಯ ಕೈಗಾರಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ (ಎನ್‌ಐಆರ್‌ಡಿಸಿ) ಪ್ರಾದೇಶಿಕ ಕಚೇರಿಯನ್ನು (ದಕ್ಷಿಣ ಭಾರತ) ಉದ್ಘಾಟಿಸಲಾಯಿತು. 

ಎನ್ಐಆರ್‌ಡಿಸಿಯ ಪ್ರಾದೇಶಿಕ ಕಚೇರಿಯ ಅಧ್ಯಕ್ಷ ವೆಮಪಲ್ಲಿ ಅಮನುಲ್ಲಾ ಮಾತನಾಡಿ, ‘ಉದ್ಯಮವನ್ನು ಎಲ್ಲಿ, ಹೇಗೆ ಆರಂಭಿಸಬೇಕು ಎಂಬುದರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಮಾರ್ಗದರ್ಶನ ನೀಡುವುದಕ್ಕಾಗಿ ಎನ್‌ಐಆರ್‌ಡಿಸಿ ಪ್ರಾದೇಶಿಕ ಕಚೇರಿ ಪ್ರಾರಂಭಿಸಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಹೇಳಿದರು.  

‘ದೇಶದಾದ್ಯಂತ ತಳಮಟ್ಟದಿಂದ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಆರ್ಥಿಕ ಸಬಲೀಕರಣ ಮಾಡುವುದು ಎನ್ಐಆರ್‌‌ಡಿಸಿ ಮೂಲ ಉದ್ದೇಶ. ಉದ್ಯಮಿಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಮತ್ತು ಗ್ರಾಮೀಣ ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿದೆ’ ಎಂದರು. 

ADVERTISEMENT

ಎನ್‌ಐಆರ್‌ಡಿಸಿ ಅಧ್ಯಕ್ಷ ಶಂಭು ಸಿಂಗ್‌, ಐಸಿಎಲ್‌ ನಿರ್ದೇಶಕಿ ರಾಜಶ್ರೀ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.