ADVERTISEMENT

‘ಇನ್‌ಸ್ಟಾಗ್ರಾಂ’ಗೆ ನಗ್ನ ಫೋಟೊ ಕಳುಹಿಸಿ ₹ 10 ಲಕ್ಷಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 19:28 IST
Last Updated 5 ಏಪ್ರಿಲ್ 2019, 19:28 IST

ಬೆಂಗಳೂರು: ಮಾರ್ಫಿಂಗ್ ತಂತ್ರಜ್ಞಾನದ ಮೂಲಕ 17ವರ್ಷದ ಯುವತಿಯೊಬ್ಬರ ನಗ್ನ ಫೋಟೊ ಸೃಷ್ಟಿಸಿದ್ದ ಆರೋಪಿಯೊಬ್ಬ ಆ ಫೋಟೊವನ್ನು ಯುವತಿಗೆ ಕಳುಹಿಸಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಆ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಯುವತಿ ನೀಡಿರುವ ದೂರಿನನ್ವಯ ಎ. ವಿಶ್ವನಾಥ್ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆತ ತಲೆಮರೆಸಿಕೊಂಡಿದ್ದಾನೆ’ ಎಂದು ರಾಜಾಜಿನಗರ ಪೊಲೀಸರು ಹೇಳಿದರು.

‘ಇನ್‌ಸ್ಟಾಗ್ರಾಂನಲ್ಲಿ ಯುವತಿ ಖಾತೆ ಹೊಂದಿದ್ದಾಳೆ. ಅವಳ ಹೆಸರಿನಲ್ಲಿ ನಕಲಿ ಖಾತೆ ತೆರೆದ ಆರೋಪಿ, ಅದ ರಲ್ಲಿ ಯುವತಿಯ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದ. ಆರೋಪಿ, ₹ 10 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ, ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹಾಗೂ ಸ್ನೇಹಿತರಿಗೆಲ್ಲ ಕಳುಹಿಸುವುದಾಗಿ ಬೆದರಿಸಿದ್ದ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಗಾಬರಿಗೊಂಡಿದ್ದ ಯುವತಿ, ಹಂತ ಹಂತವಾಗಿ ಆರೋಪಿಗೆ ₹6 ಲಕ್ಷ ಕೊಟ್ಟಿದ್ದಳು. ಅಷ್ಟಾದರೂ ಆರೋಪಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ. ಆತನ ವರ್ತನೆಯಿಂದ ಬೇಸತ್ತ ಯುವತಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.