ADVERTISEMENT

ಬೆಂಗಳೂರು ‌| ಮೇ 27ಕ್ಕೆ ಪ್ರಕಸಂ ರಂಗತಂಡದಿಂದ ‘ವರಲಕ್ಷ್ಮಿ ಅವಾಂತರ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಮೇ 2023, 7:50 IST
Last Updated 24 ಮೇ 2023, 7:50 IST
ಪ್ರಕಸಂ ತಂಡ
ಪ್ರಕಸಂ ತಂಡ   

ಬೆಂಗಳೂರು: ರಂಗಭೂಮಿಯಲ್ಲಿ ಚಿರಪರಿಚಿತ ‘ಪ್ರಕಸಂ’ ರಂಗತಂಡ ‘ವರಲಕ್ಷ್ಮಿ ಅವಾಂತರ’ ಎಂಬ ನೂತನ ನಾಟಕದೊಂದಿಗೆ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದೆ.

ಬೆಂಗಳೂರಿನ  ಕೆ.ಎಚ್.ಕಲಾಸೌಧವನ್ನು ದಶಕಗಳ ಕಾಲ ನಿರ್ವಹಿಸಿದ್ದ ‘ಪ್ರಕಸಂ’ ನಗೆ ನಾಟಕಗಳಿಗೆ ಜನಪ್ರಿಯ. ಪ್ರತಿ ವರ್ಷ ಹೊಸ ಕಲಾವಿದರೊಂದಿಗೆ ಒಂದು ನಾಟಕ ಪ್ರದರ್ಶಿಸುವ ವಾಡಿಕೆಯನ್ನು ಈ ತಂಡ ರೂಢಿಸಿಕೊಂಡು ಬಂದಿದೆ. ಅದರಂತೆ ಈ ವರ್ಷ ಮನುಷ್ಯ ಹಾಗೂ ಸಾಕು ಪ್ರಾಣಿಗಳ ನಡುವಿನ ಸಂಬಂಧ ವಿವರಿಸುವ ‘ವರಲಕ್ಷ್ಮಿ ಅವಾಂತರ’ ಎಂಬ ಹಾಸ್ಯ ನಾಟಕ ಪ್ರದರ್ಶಿಸುತ್ತದೆ.

ಮೇ 27ರಂದು ಸಂಜೆ 7.30 ಗಂಟೆಗೆ ಮತ್ತು ಮೇ 28ರಂದು 4.30ಕ್ಕೆ ಹಾಗು 7.30ಕ್ಕೆ ನಗರದ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶನಗಳು ನಡೆಯಲಿವೆ.

ADVERTISEMENT

‘ನಾಟಕದೊಳಗೆ ಸ್ಟಾಂಡಪ್ ಅಳವಡಿಸಿಕೊಂಡಿರುವ ಮೊಟ್ಟ ಮೊದಲ ಪ್ರಯೋಗ ಇದಾಗಿದೆ. ಮದುವೆಯ ನಂತರ ಗಂಡು ಹೆಣ್ಣಿನ ನಡುವಿನ ಸರಸಮಯ ಗೊಂದಲಗಳ ಬಗ್ಗೆ ವ್ಯಾಖ್ಯಾನ ಮಾಡುತ್ತದೆ’ ಎನ್ನುತ್ತಾರೆ ನಾಟಕದ ನಿರ್ದೇಶಕ ಪಿ.ಡಿ.ಸತೀಶ್ ಚಂದ್ರ.

ನಾಗವೇಣಿ ರಂಗನ್ ಈ ನಾಟಕದ ರಚನಾಕಾರರು. ಈ ತಂಡ ಹಿಂದೆ ಸೈರಂದ್ರಿ, ಮಹಪೀಡೆ ಮಹಬ್ಲೂ ರಂಗಪ್ರಯೋಗ ನಡೆಸಿ ಜನಮನ್ನಣೆ ಪಡೆದಿತ್ತು.

ನಾಟಕದ ಟಿಕೆಟ್‌ ಮತ್ತು ವಿವರಗಳಿಗೆ : www.prakasamtrust.org/va ಅಥವಾ ಕರೆ ಮಾಡಿ 9900012648

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.