ADVERTISEMENT

ಪದ್ಮಿನಿಗೆ ‘ಆದರ್ಶಜೈನ ಸಮಾಜ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 19:26 IST
Last Updated 12 ಜನವರಿ 2026, 19:26 IST
<div class="paragraphs"><p>ಪದ್ಮಿನಿ</p></div>

ಪದ್ಮಿನಿ

   

ಬೆಂಗಳೂರು: ಉತ್ತರ ಕರ್ನಾಟಕ ಜೈನ ಬಾಂಧವರು ನೀಡುವ 2026ನೇ ಸಾಲಿನ ‘ಆದರ್ಶ ಜೈನ ಸಮಾಜ ರತ್ನ ಪ್ರಶಸ್ತಿ’ಗೆ ಲೇಖಕಿ ಪದ್ಮಿನಿ ನಾಗರಾಜು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ. ಜನವರಿ 18ರಂದು ಕರ್ನಾಟಕ ಜೈನ ಭವನದಲ್ಲಿ ನಡೆಯುವ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ
ಸಚಿವ ಡಿ. ಸುಧಾಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಭಾರತೀಯ ಜೈನ್‌ ಮಿಲನ್‌ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಕರ್ನಾಟಕ ಜೈನ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್. ಜಿತೇಂದ್ರಕುಮಾರ್, ಉತ್ತರ ಕರ್ನಾಟಕ ಜೈನ ಬಾಂಧವರು ಸಂಘಟನೆಯ ಅಧ್ಯಕ್ಷ ಸುಭಾಷ ಪಿ. ಜಿನಗೌಡ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಕಾರ್ಯದರ್ಶಿ ಬಾಹುಬಲಿ ಗೌರಜ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.