ADVERTISEMENT

ಮಣಿಪಾಲ್ ಸೆಂಟರ್‌ನಲ್ಲಿ ಪಾರ್ಸೆಲ್‌ ಬುಕ್ಕಿಂಗ್‌ ಅಂಚೆ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 26 ಜೂನ್ 2023, 19:50 IST
Last Updated 26 ಜೂನ್ 2023, 19:50 IST
ಬೆಂಗಳೂರಿನ ಮಣಿಪಾಲ್ ಸೆಂಟರ್‌ನಲ್ಲಿ ಸೋಮವಾರ ನಡೆದ ಕರ್ನಾಟಕ ಅಂಚೆ ವೃತ್ತದಿಂದ ಪಾರ್ಸಲ್ ಬುಕಿಂಗ್ ಸೇವೆ ಉದ್ಘಾಟಿಸಲಾಯಿತು.
ಬೆಂಗಳೂರಿನ ಮಣಿಪಾಲ್ ಸೆಂಟರ್‌ನಲ್ಲಿ ಸೋಮವಾರ ನಡೆದ ಕರ್ನಾಟಕ ಅಂಚೆ ವೃತ್ತದಿಂದ ಪಾರ್ಸಲ್ ಬುಕಿಂಗ್ ಸೇವೆ ಉದ್ಘಾಟಿಸಲಾಯಿತು.    

ಬೆಂಗಳೂರು: ಕರ್ನಾಟಕ ಅಂಚೆ ವೃತ್ತದ ‘ಡೋರ್‌ ಸ್ಟೆಪ್‌ ಬುಕ್ಕಿಂಗ್‌ ಆಫ್‌ ಪಾರ್ಸೆಲ್ಸ್‌ ಥ್ರೂ ಮೊಬೈಲ್ ವ್ಯಾನ್ಸ್‌’ ಸೇವೆ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಮಣಿಪಾಲ್ ಸೆಂಟರ್‌ನಲ್ಲಿ ಸೋಮವಾರ ಆರಂಭಗೊಂಡಿತು.

ನಿಗದಿತ ಪ್ರದೇಶದ ಸಾರ್ವಜನಿಕರು ಪಾರ್ಸೆಲ್‌ ಬುಕ್ಕಿಂಗ್‌ ಸೇವೆಯನ್ನು ಹೆಚ್ಚಿನ ಶುಲ್ಕ ನೀಡದೇ ಪಡೆಯಬಹುದು. ಮೊಬೈಲ್‌ ವ್ಯಾನ್‌ ನಿತ್ಯ ಮಧ್ಯಾಹ್ನ 2.30ಕ್ಕೆ ಮಣಿಪಾಲ್‌ ಸೆಂಟರ್‌ಗೆ ಬರಲಿದ್ದು, 3.30ರವರೆಗೆ ಇರಲಿದೆ. ಬೇಡಿಕೆ ಆಧರಿಸಿ ಬೆಂಗಳೂರಿನ ಇತರೆಡೆಗೆ  ಈ ಸೇವೆ ವಿಸ್ತರಿಸುವ ಉದ್ದೇಶವಿದೆ ಎಂದು ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌ ಮಾಹಿತಿ ನೀಡಿದರು.

ಬೆಂಗಳೂರು ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಪಾರ್ಸೆಲ್‌ ಬುಕ್‌ ಮಾಡಲು ಮೊಬೈಲ್‌ ಸಂಖ್ಯೆ 94808 09797 ಸಂಪರ್ಕಿಸಬಹುದು.  ಪ್ರಾಯೋಗಿಕವಾಗಿ 20 ದಿನದ ಹಿಂದೆ ಅಬ್ಬಿಗೆರೆ–ಪೀಣ್ಯದಲ್ಲಿ ಆರಂಭಿಸಿದ್ದೆವು. ಈವರೆಗೆ 1,124 ಪಾರ್ಸೆಲ್‌ಗಳು ಬಂದಿವೆ’ ಎಂದರು.

ADVERTISEMENT

ಎಂ.ಜಿ. ರಸ್ತೆ ಹೆಚ್ಚು ವಾಣಿಜ್ಯ ಸಂಕೀರ್ಣಗಳಿರುವ ಪ್ರದೇಶವಾಗಿದ್ದು, ಇಲ್ಲಿ ಜನರಿಗೆ ಹೆಚ್ಚು ಅನುಕೂಲಕರ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.