ADVERTISEMENT

ಪಕ್ಷದ ಕೆಲಸ ಸಾಮಾಜಿಕ ಜವಾಬ್ದಾರಿ: ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 15:27 IST
Last Updated 23 ಮಾರ್ಚ್ 2025, 15:27 IST
ಮಾಜಿ ಶಾಸಕ ಅರವಿಂದ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕಿ ಮಂಜುಳಾ ಲಿಂಬಾವಳಿ, ಹೂಡಿ ಪಿಳ್ಳಪ್ಪ, ಬಿ.ಎನ್.ನಟರಾಜ್ ಇದ್ದರು
ಮಾಜಿ ಶಾಸಕ ಅರವಿಂದ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕಿ ಮಂಜುಳಾ ಲಿಂಬಾವಳಿ, ಹೂಡಿ ಪಿಳ್ಳಪ್ಪ, ಬಿ.ಎನ್.ನಟರಾಜ್ ಇದ್ದರು   

ಕೆ.ಆರ್.ಪುರ: ಪಕ್ಷದ ಕೆಲಸವೆಂದರೆ ಚುನಾವಣೆ ಬಂದಾಗ ಮಾಡುವುದಲ್ಲ, ಇದೊಂದು ನಿರಂತರವಾಗಿ ಮಾಡುವ ಸಾಮಾಜಿಕ ಜವಾಬ್ದಾರಿ ಎಂದು ಮಾಜಿ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಕೆ.ಆರ್.ಪುರ ಸಮೀಪದ ಕಾಟಂನಲ್ಲೂರಿನಲ್ಲಿ ಹಮ್ಮಿಕೊಂಡಿದ್ದ ಮಹದೇವಪುರ ಕ್ಷೇತ್ರದ ಬಿಜೆಪಿ ಗ್ರಾಮಾಂತರ ಮಂಡಲದ ನೂತನ ಪದಾಧಿಕಾರಿಗಳ ಮತ್ತು ಮೋರ್ಚಾಗಳ ಘೋಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪಕ್ಷ ನೀಡಿರುವ ಜವಾಬ್ದಾರಿ ಉತ್ತಮವಾಗಿ ನಿರ್ವಹಿಸುವ ಉದ್ದೇಶದಿಂದ ಸ್ಥಾನಮಾನಗಳನ್ನು ನೀಡಲಾಗಿದೆ. ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಸಾರ್ವಜನಿಕರ ಕೆಲಸದ ಜೊತೆಗೆ ಸಾಮಾಜಿಕ ಕಾರ್ಯಕರ್ತರಾದರೆ ಪಕ್ಷ ಯಶಸ್ಸು ಸಾಧಸಲಿದೆ ಎಂದರು.

ADVERTISEMENT

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಶಾಸಕಿ ಮಂಜುಳಾ ಲಿಂಬಾವಳಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಎಚ್. ಎಸ್. ಪಿಳ್ಳಪ್ಪ, ನಿಕಟಪೂರ್ವ ಅಧ್ಯಕ್ಷ ಬಿ.ಎನ್. ನಟರಾಜ್, ಮುಖಂಡರಾದ ಕೆ.ಎಂ.ಎಂ. ಮಂಜುನಾಥ್, ಅನಿಲ್, ಕೆ.ವಿ. ನಾಗರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.