ADVERTISEMENT

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ದೂರದ ಊರುಗಳ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಮೇ 2020, 6:01 IST
Last Updated 19 ಮೇ 2020, 6:01 IST
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ   

ಬೆಂಗಳೂರು: ನಗರದ ಬಸ್ ನಿಲ್ದಾಣದಲ್ಲಿಕಲಬುರ್ಗಿ, ರಾಯಚೂರು, ಬಳ್ಳಾರಿಯಂಥದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಸಂಜೆ 7ಕ್ಕೆ ನಿಗದಿತ ಊರು ತಲುಪಬೇಕಾಗಿರುವುದರಿಂದ 10.30ರ ವೇಳೆಗೇ ಕೊನೆಯ ಬಸ್‌ಗಳು ತೆರಳಿವೆ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದವರು ಊರಿಗೆ ಹೋಗಲೂ ಆಗದೆ, ಹಿಂದಿರುಗಲೂ ಆಗದೆ ಪರದಾಡುತ್ತಿದ್ದಾರೆ.

‘ಬಳ್ಳಾರಿಗೆ ಹೋಗಬೇಕು. ನೆಲಮಂಗಲದಿಂದ ಬಂದಿದ್ದೇನೆ. ₹70 ದಿನದ ಪಾಸ್ ತೆಗೆದುಕೊಂಡು ಬಂದಿದ್ದೆ. 10.30ಕ್ಕೇ ನಿಲ್ದಾಣಕ್ಕೆ ಬಂದಿದ್ದರೂ, ಈಗ ಬಳ್ಳಾರಿಗೆ ಬಸ್ ಇಲ್ಲ. ನಾಳೆ ಬನ್ನಿ ಎನ್ನುತ್ತಿದ್ದಾರೆ’ಎಂದು ಶಂಕರ್ ಅಳಲು ತೋಡಿಕೊಂಡರು.

ADVERTISEMENT

‘ಗಾರೆ ಕೆಲಸ ಮಾಡುತ್ತಿದ್ದೆ. ಇನ್ನು ಕೆಲಸಕ್ಕೆ ಬರಲ್ಲ ಎಂದು ಹೇಳಿ ಬಂದಿದ್ದೆ. ಈಗ ವಾಪಸ್ ಹೋಗಲು ಕಷ್ಟವಾಗಿದೆ. ಇಲ್ಲೇ ಉಳಿದುಕೊಳ್ಳಲೂ ವ್ಯವಸ್ಥೆ ಇಲ್ಲ’ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.