ಬೆಂಗಳೂರು: ನಗರಕ್ಕೆ ಸಂಬಂಧಿಸಿದಂತೆ 72 ಪ್ರಶ್ನೆಗಳನ್ನು ಬೆಂಗಳೂರು ಕೇಂದ್ರ ಕ್ಷೇತ್ರದ ಸದಸ್ಯ ಪಿ.ಸಿ. ಮೋಹನ್ ಲೋಕಸಭೆಯಲ್ಲಿ ಕೇಳಿದ್ದಾರೆ.
ಬೆಂಗಳೂರು ನಗರದಿಂದ ಆಯ್ಕೆಯಾಗಿರುವ ನಾಲ್ವರು ಸಂಸದರ ಒಂದು ವರ್ಷದ ಸಾಧನೆ, 32 ಶಾಸಕರ ಎರಡು ವರ್ಷದ ಸಾಧನೆಯ ವರದಿಯಲ್ಲಿ ಪಿ.ಸಿ. ಮೋಹನ್ ಒಂದು ಪ್ರಶ್ನೆ ಕೇಳಿದ್ದಾರೆ ಎಂದು ಭಾನುವಾರದ ಸಂಚಿಕೆಯಲ್ಲಿ ವರದಿಯಾಗಿತ್ತು. ಇದು ತಪ್ಪು ಮಾಹಿತಿ ಎಂದು ಪಿ.ಸಿ. ಮೋಹನ್ ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದಂತೆ 72 ಪ್ರಶ್ನೆಗಳನ್ನು ಕೇಳಿರುವ ಅವರು, ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದಾರೆ. ಅಧಿವೇಶನದಲ್ಲಿ ಶೇ 98.5 ಹಾಜರಾತಿ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.