ADVERTISEMENT

ಪೀಣ್ಯ ದಾಸರಹಳ್ಳಿ: ನಾಳೆಯಿಂದ ಅಸೆಂಟ್ ಕನ್ನಡ ಕಲರವ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 19:39 IST
Last Updated 26 ನವೆಂಬರ್ 2025, 19:39 IST
<div class="paragraphs"><p>ಶಾಸಕ ಎಸ್. ಮುನಿರಾಜು</p></div>

ಶಾಸಕ ಎಸ್. ಮುನಿರಾಜು

   

ಪೀಣ್ಯ ದಾಸರಹಳ್ಳಿ: ಹಾವನೂರು ಬಡಾವಣೆಯ ಅಸೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ 'ಅಸೆಂಟ್ ಕನ್ನಡ ಕಲರವ -2025' ಎಂಬ ಶೀರ್ಷಿಕೆಯಡಿ ಎರಡು ದಿನಗಳ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಬಿ.ಎಂ. ವೆಂಕಟೇಶ್ ತಿಳಿಸಿದರು.

ಶಾಸಕ ಎಸ್. ಮುನಿರಾಜು ಅವರು ನ. 28ರ ಬೆಳಿಗ್ಗೆ 8:30ಕ್ಕೆ ಕನ್ನಡ ಧ್ವಜಾರೋಹಣ ಮಾಡಿ ಕಲಾತಂಡಗಳ ಜಾಥಾಕ್ಕೆ ಚಾಲನೆ ನೀಡುವರು. ಮಧ್ಯಾಹ್ನ 2 ಕ್ಕೆ ನಟ ಹೊನ್ನವಳ್ಳಿ ಕೃಷ್ಣ, ಸಾಹಿತಿ ಕಾಳೇಗೌಡ ನಾಗವಾರ, ಕಿರುತೆರೆ ನಟಿ ಪುನೀತ ಗೌಡ, ಪ್ರಾಧ್ಯಾಪಕ ಜಯಶಂಕರ್ ಹಲಗೂರು ಭಾಗವಹಿಸುವರು.

ADVERTISEMENT

ನ.29ರ ಬೆಳಿಗ್ಗೆ 9ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ಆಯೋಜಿಸಲಾಗಿದೆ. ಭೂಮಿಕಾ ಸೇವಾ ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ ಅಧ್ಯಕ್ಷತೆ ವಹಿಸುವರು. ರಾಜೇಂದ್ರ ಕೊಣ್ಣೂರ, ಎನ್.ಡಿ. ಕೃಷ್ಣಮೂರ್ತಿ ಉಪಸ್ಥಿತರಿರುವರು. ವಿದ್ಯಾರ್ಥಿಗಳಿಂದ ನೃತ್ಯ, ಹಾಡಿನ ಕಾರ್ಯಕ್ರಮ ಇರಲಿವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.