ADVERTISEMENT

ಕ್ವಾಡ್‌ಕಾಪ್ಟರ್‌ ಅಭಿವೃದ್ಧಿಗೆ ನೆರವು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 22:15 IST
Last Updated 28 ಡಿಸೆಂಬರ್ 2019, 22:15 IST
ಕ್ವಾಡ್‌ಕಾಪ್ಟರ್‌ನೊಂದಿಗೆ ವಿದ್ಯಾರ್ಥಿ ಜಾಯ್‌ ಅಗರ್‌ವಾಲ್‌ 
ಕ್ವಾಡ್‌ಕಾಪ್ಟರ್‌ನೊಂದಿಗೆ ವಿದ್ಯಾರ್ಥಿ ಜಾಯ್‌ ಅಗರ್‌ವಾಲ್‌    

ಬೆಂಗಳೂರು: ನಾಗಪುರದಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಜಾಯ್‌ ಅಗರ್‌ವಾಲ್‌ ಕ್ವಾಡ್‌ಕಾಪ್ಟರ್‌(ಹೆಲಿಕಾಪ್ಟರ್‌ ಮಾದರಿ ಡ್ರೋನ್ ಸಾಧನ) ಅಭಿವೃದ್ಧಿ ಪಡಿಸಿದ್ದಾರೆ. ಈ ಸಾಧನೆ ಮಾಡಲು ಪಿಇಎಸ್‌ ವಿಶ್ವವಿದ್ಯಾಲಯವು ಆರ್ಥಿಕ ನೆರವು ನೀಡಿದೆ.

ಪಿಇಎಸ್‌ ವಿಶ್ವವಿದ್ಯಾಲಯದ ಡಾ. ಶರಣ್‌ ಅಸುಂಡಿ ಮತ್ತು ಜಿಮೇಶ್‌ ಭಗತ್‌ ಅವರ ಮಾರ್ಗದರ್ಶನದಲ್ಲಿ ಜಾಯ್‌, ಈ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ತಾಂತ್ರಿಕ ಮೇಳದಲ್ಲಿ ಪಾಲ್ಗೊಳ್ಳಲು ಬಂದಿದ್ದ ಜಾಯ್‌ ಪ್ರತಿಭೆ ಗುರುತಿಸಿದ ವಿಶ್ವವಿದ್ಯಾಲಯವು, ಕ್ವಾಡ್‌ಕಾಪ್ಟರ್‌ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಖರೀದಿಗೆ ಮತ್ತು ತಾಂತ್ರಿಕ ಅಂಶ ಅಭಿವೃದ್ಧಿಗೆ ಸಹಾಯ ಮಾಡಿದೆ.

ಹೊಸ ಕಟ್ಟಡಗಳು, ಪ್ರಾಚೀನ ವಾಸ್ತುಶಿಲ್ಪ ತಾಣಗಳು, ದೊಡ್ಡ ಹಡಗುಗಳ ಮೇಲ್ಮೈಯನ್ನು ಕ್ವಾಡ್‌ಕಾಪ್ಟರ್‌ ಸ್ಕ್ಯಾನ್‌ ಮಾಡಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.