ADVERTISEMENT

ಬೆಂಗಳೂರು | ಆ್ಯಪಲ್ ಕಂಪನಿ ಹೆಸರಿನಲ್ಲಿ ನಕಲಿ ಉಪಕರಣ ಮಾರಾಟ: ಆರೋಪಿ ಬಂಧನ

ಅಂಗಡಿ ಮೇಲೆ ಸಿಸಿಬಿ ದಾಳಿ, ₹8 ಲಕ್ಷ ಮೌಲ್ಯದ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 14:03 IST
Last Updated 21 ಜುಲೈ 2024, 14:03 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಆ್ಯಪಲ್ ಕಂಪನಿಯ ಹೆಸರಿನಲ್ಲಿ ನಕಲಿ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದ ಚಿಕ್ಕಪೇಟೆ ಅಂಗಡಿಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಗೋದಾಮಿನಲ್ಲಿ ಕಂಪನಿಯ ಬ್ರ್ಯಾಂಡ್‌ ಮುದ್ರಿಸಿದ್ದ ನಕಲಿ ಉಪಕರಣಗಳನ್ನು ದಾಸ್ತಾನು ಮಾಡಿಕೊಂಡು, ಅಸಲಿ ಎಂದು ನಂಬಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು.

ADVERTISEMENT

ಖಚಿತ ಮಾಹಿತಿ ಆಧರಿಸಿ ಸಿಸಿಬಿಯ ಆರ್ಥಿಕ ಅಪರಾಧ ದಳದ ಸಿಬ್ಬಂದಿ ಅಂಗಡಿ ಮೇಲೆ ದಾಳಿ ನಡೆಸಿ, ವ್ಯಕ್ತಿಯನ್ನು ಬಂಧಿಸಿ, ₹8 ಲಕ್ಷ ಮೌಲ್ಯದ ನಕಲಿ ಏರ್‌ಪಾಡ್ಸ್‌ ಪ್ರೊ, ಯುಎಸ್‌ಬಿ–ಸಿ ಲೈಟ್ನಿಂಗ್ ಕೇಬಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಟಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಲಕ್ಷಾಂತರ ಮೌಲ್ಯದ ತಾಮ್ರದ ವೈರ್ ವಶ: ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್‌ ನಮೂದಿಸಿ ತಾಮ್ರದ ವಿದ್ಯುತ್‌ ತಂತಿಗಳನ್ನು ಮಾರಾಟ ಮಾಡುತ್ತಿದ್ದ ಗರುಡಾಚಾರ್‌ ಪಾಳ್ಯದ ಮಹದೇವಪುರ ವ್ಯಾಪ್ತಿಯ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಎವಿ ಗಾರ್ಡ್‌, ಆರ್‌ಆರ್‌, ಆ್ಯಂಕರ್, ಗ್ರೇಟ್‌ ವೈಟ್‌, ಹವೇಲಿ ಕಂಪನಿಗಳ ತಾಮ್ರದ ತಂತಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆರೋಪಿಯಿಂದ ₹6.20 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.