
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರದ ಪಶ್ಚಿಮ ಸಶಸ್ತ್ರ ಮೀಸಲು ಪಡೆಗಾಗಿ (ಸಿಎಆರ್) ಉಲ್ಲಾಳದಲ್ಲಿ ಹೊಸ ಪರೇಡ್ ಮೈದಾನ ನಿರ್ಮಿಸಲಾಗುತ್ತಿದ್ದು, ಅದರ ಕೆಲಸ ಭರದಿಂದ ಸಾಗಿದೆ.
ಮೈದಾನದ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಪೊಲೀಸ್ ಕಮಿಷರನ್ ಭಾಸ್ಕರ್ ರಾವ್, ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮೈದಾನ ನಿರ್ಮಾಣದ ರೂಪುರೇಷೆ ಬಗ್ಗೆ ಮಾಹಿತಿ ಹಂಚಿಕೊಂಡರು. ಸಿಎಆರ್ ಡಿಸಿಪಿ ಸಿದ್ದರಾಜು ಇದ್ದರು.
ಪೊಲೀಸ್ ಇಲಾಖೆಗೆ ಸೇರಿದ್ದ ಖಾಲಿ ಜಾಗದಲ್ಲಿ ಕಸ ಬೆಳೆದಿತ್ತು. ಜೆಸಿಬಿ ಯಂತ್ರದ ಸಹಾಯದಿಂದ ಕಸವನ್ನೆಲ್ಲ ತೆಗೆದು ಜಾಗವನ್ನು ಸಮತಟ್ಟಾಗಿ ಮಾಡುವ ಕೆಲಸ ನಡೆದಿದೆ. ಮೈದಾನ ನಿರ್ಮಾಣವಾದರೆ ಪೊಲೀಸರ ಪರೇಡ್ ಹಾಗೂ ಇಲಾಖೆಯು ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.