ADVERTISEMENT

‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ ಡಿ. 16ರಂದು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 19:59 IST
Last Updated 4 ಡಿಸೆಂಬರ್ 2023, 19:59 IST
‘ಪ್ರಜಾವಾಣಿ ರಸಪ್ರಶ್ನೆ’ ಸ್ಪರ್ಧೆ ಆಯೋಜನೆ
‘ಪ್ರಜಾವಾಣಿ ರಸಪ್ರಶ್ನೆ’ ಸ್ಪರ್ಧೆ ಆಯೋಜನೆ   

ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ‘ಪ್ರಜಾವಾಣಿ’ ವತಿಯಿಂದ ಡಿ. 16ರಂದು ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ.

ಪರಿಶ್ರಮ ಪಿಯು ಕಾಲೇಜು ಹಾಗೂ ಭೀಮಾ ಗೋಲ್ಡ್‌ ಸಹಯೋಗದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಜಯನಗರ 4ನೇ ಹಂತದ ವಿವೇಕ್ ಸಭಾಭವನದಲ್ಲಿ (ಯುವಕ ಸಂಘ) ಸ್ಪರ್ಧೆ ನಡೆಯಲಿದೆ.

ಬೆಂಗಳೂರು ವಲಯದ ಸ್ಪರ್ಧೆಯಲ್ಲಿ 8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು–ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು, ಶಾಲೆಯ ಸಮ್ಮತಿಯೊಂದಿಗೆ ಆನ್‌ಲೈನ್‌ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.

ADVERTISEMENT

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.