ADVERTISEMENT

ಕೇಂದ್ರ ಬಜೆಟ್ ಕುರಿತು ಸಂವಾದ | ತಂತ್ರಜ್ಞಾನ ಆಧಾರಿತ ಕೌಶಲ ಯೋಜನೆಗೆ ಒತ್ತು: ಜೋಶಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 18:33 IST
Last Updated 24 ಫೆಬ್ರುವರಿ 2026, 18:33 IST
ಪೀಣ್ಯ ಕೈಗಾರಿಕಾ ಸಂಘದ ಸಭಾಂಗಣದಲ್ಲಿ 2026ರ ಕೇಂದ್ರ ಬಜೆಟ್ ಸಂವಾದ ಸಭೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್. ಮುನಿರಾಜು, ಸಂಘದ ಅಧ್ಯಕ್ಷ ಡಿ.ಪಿ.ದಾನಪ್ಪ ಮತ್ತು ಪದಾಧಿಕಾರಿಗಳಿದ್ದರು
ಪೀಣ್ಯ ಕೈಗಾರಿಕಾ ಸಂಘದ ಸಭಾಂಗಣದಲ್ಲಿ 2026ರ ಕೇಂದ್ರ ಬಜೆಟ್ ಸಂವಾದ ಸಭೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್. ಮುನಿರಾಜು, ಸಂಘದ ಅಧ್ಯಕ್ಷ ಡಿ.ಪಿ.ದಾನಪ್ಪ ಮತ್ತು ಪದಾಧಿಕಾರಿಗಳಿದ್ದರು   

ಪೀಣ್ಯ ದಾಸರಹಳ್ಳಿ: ‘ಭವಿಷ್ಯದ ತಂತ್ರಜ್ಞಾನ ಆಧಾರಿತ ಕೌಶಲಕ್ಕೆ ಒತ್ತು ನೀಡುವ 2047ರ ವಿಕಸಿತ ಭಾರತದ ಕಲ್ಪನೆಯೊಂದಿಗೆ ಈ ಬಾರಿ ಕೇಂದ್ರ ಬಜೆಟ್‌ ಮಂಡಿಸಲಾಗಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಪೀಣ್ಯ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕೇಂದ್ರ ಬಜೆಟ್ ಕುರಿತ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

‘ಜಗತ್ತಿನ ಬೇಡಿಕೆಯ ವಸ್ತುಗಳನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಬೇಕು. ರಫ್ತಿಗೆ ಹೆಚ್ಚು ಒತ್ತು ನೀಡಿದಾಗ ಆರ್ಥಿಕ ಬೆಳವಣಿಗೆಗೂ ದಾರಿಯಾಗಲಿದೆ. ದೇಶದ ಮೂರು ಕಡೆ ದೊಡ್ಡ ಕೆಮಿಕಲ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯೂ ಆರು ಪಟ್ಟು ಜಾಸ್ತಿಯಾಗಿದೆ. ಆತ್ಮ ನಿರ್ಭರತೆಯ ಮೂಲಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

ಕೇಂದ್ರ ಕಾರ್ಮಿಕ, ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ನಮ್ಮ ಕೈಗಾರಿಕೆಗಳ ಮುಂದಿನ ಭವಿಷ್ಯ ಎಐ, ರೋಬೊ ತಂತ್ರಜ್ಞಾನದಲ್ಲಿ ಇರಲಿದೆ. ‌ವಿಕಸಿತ ಭಾರತ ರೋಜಗಾರ್ ಯೋಜನೆ ಅಡಿ ಉದ್ಯೋಗ ಕಲ್ಪಿಸುವ ಪ್ರಯತ್ನವೂ ಅರಂಭವಾಗಿದೆ’ ಎಂದು ತಿಳಿಸಿದರು.

ಶಾಸಕ ಎಸ್.ಮುನಿರಾಜು ಮಾತನಾಡಿ, 'ಪ್ರಧಾನಿ ಮೋದಿ ಅವರ ಪರಿಕಲ್ಪನೆಯ ಮೇಕ್ ಇನ್ ಇಂಡಿಯಾ ಅಡಿ ಮಧ್ಯಮ, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗಿದೆ. ನನ್ನ ಕ್ಷೇತ್ರದಲ್ಲಿ ಹೆಚ್ಚು ಭಾಗ ಕೈಗಾರಿಕಾ ಪ್ರದೇಶವಿದ್ದು ಸಮಸ್ಯೆಗಳನ್ನು ಕೇಂದ್ರ ಸಚಿವರ ಗಮನಕ್ಕೆ ತಂದು ಬಗೆಹರಿಸಲು ಶ್ರಮಿಸುತ್ತೇನೆ‘ ಎಂದು ತಿಳಿಸಿದರು.

‌ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ  ಡಿ.ಪಿ. ದಾನಪ್ಪ ಅವರು ಕೇಂದ್ರ ಸಚಿವರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು. ಹಿರಿಯ ಉಪಾಧ್ಯಕ್ಷ ಪಾಟೀಲ್ ಡಿ.ಎಚ್, ಉಪಾಧ್ಯಕ್ಷ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಬಿ. ತಿಮ್ಮಯ್ಯ, ಖಜಾಂಚಿ ಎ.ಪಿ.ಸೆಲ್ವಕುಮಾರ್, ಜಂಟಿ ಖಜಾಂಚಿ ಎಂ.ಆರ್‌.ರಂಗಸ್ವಾಮಿ, ಗೌರವ ಕಾರ್ಯದರ್ಶಿ ಬಿ. ಬೀರಪ್ಪ ಇದ್ದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು'ಸಿಎಂ ಬದಲಾವಣೆಯ ಗೊಂದಲದ ಮಧ್ಯೆ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ. ಅಭಿವೃದ್ಧಿ ಕುಂಠಿತವಾಗಿದೆ ಅನೇಕ ಕಡೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆ ರಸ್ತೆ ಸಮಸ್ಯೆ ಜಾಸ್ತಿ ಇದೆ. ರಾಜ್ಯದಲ್ಲಿ ಆಂತರಿಕ ಭಿನ್ನಮತದಿಂದ ದಲಿತ ಸಿಎಂ ವಿಚಾರ ತರ್ತಾ ಇದ್ದಾರೆ ಅಷ್ಟೇ ?ಎಂದು ಉತ್ತರಿಸಿದರು. ಎಐ ಸಮ್ಮಿಟ್ ನಲ್ಲಿ 45 ಜನ ಮಂತ್ರಿಗಳು 29 ದೇಶದ ಮುಖ್ಯಸ್ಥರು ಇರುವ ಸ್ಥಳದಲ್ಲಿ ಕಾಂಗ್ರೆಸ್ ನವರು ಮಾಡಿದ್ದು ಸರಿ ಇಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.