ADVERTISEMENT

ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ: ವಿಪರೀತ‌ ದಟ್ಟಣೆ, ಸಾಲುಗಟ್ಟಿ ನಿಂತ ವಾಹನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 9:57 IST
Last Updated 4 ಮಾರ್ಚ್ 2022, 9:57 IST
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ: ವಿಪರೀತ‌ ದಟ್ಟಣೆ, ಸಾಲುಗಟ್ಟಿ ನಿಂತ ವಾಹನ
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ: ವಿಪರೀತ‌ ದಟ್ಟಣೆ, ಸಾಲುಗಟ್ಟಿ ನಿಂತ ವಾಹನ   

ಬೆಂಗಳೂರು: ಸ್ವಾತಂತ್ರ್ಯ ಉದ್ಯಾನದಲ್ಲಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಒಕ್ಕೂಟ, ಬಿಸಿಯೂಟ ತಯಾರಕರ ಒಕ್ಕೂಟ ಸೇರಿ‌ ಹಲವು ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು‌ ನಿಲ್ದಾಣದಿಂದ ಪ್ರತಿಭಟನಕಾರರು ಮೆರವಣಿಗೆಯನ್ನೂ ನಡೆಸಿದರು. ಇದರಿಂದ ಮೇಲ್ಸೇತುವೆಯಲ್ಲಿ ವಾಹನಗಳ ಓಡಾಟ ನಿರ್ಬಂಧಿಸಲಾಗಿತ್ತು.

ADVERTISEMENT

ಇದರಿಂದ ವಾಹನಗಳು ನಿಂತಲೇ ನಿಲ್ಲಬೇಕಾಗಿದೆ. ಮೆಜೆಸ್ಟಿಕ್, ಶೇಷಾದ್ರಿಪುರ, ಗಾಂಧಿನಗರ, ಕೆಂಪೇಗೌಡ ರಸ್ತೆ, ಕೆ.ಆರ್. ವೃತ್ತ ಹಾಗೂ ಸುತ್ತಮುತ್ತ ದಟ್ಟಣೆ ಇದೆ.

'ಸಾಲು ಸಾಲು ಪ್ರತಿಭಟನೆಯಿಂದಾಗಿ ಕೆಲ ದಿನಗಳಿಂದ ನಿತ್ಯವೂ ದಟ್ಟಣೆ ಉಂಟಾಗುತ್ತಿದ್ದು, ಜನ ಸಮಾನ್ಯರು ಪರದಾಡುವಂತಾಗಿದೆ' ಎಂದು ದಟ್ಟಣೆಯಲ್ಲಿ ಸಿಲುಕಿರುವ ಆಟೊ ಚಾಲಕ ರಾಮು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.