ಕೆ.ಆರ್.ಪುರ: ರಾಮಮೂರ್ತಿನಗರ ವಾರ್ಡ್‌ನ ಕನಕನಗರದಲ್ಲಿ ಸಾರ್ವಜನಿಕರೆ ಚರಂಡಿ ಸ್ವಚ್ಛ ಮಾಡಿದರು.
ಚರಂಡಿಯಲ್ಲಿ ಹೂಳು, ಕಸ, ಕಡ್ಡಿ ತುಂಬಿಕೊಂಡಿದ್ದ ಕಾರಣ ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ಕೊಳಚೆ ನೀರು ಹರಿಯಿತು. ಇದರಿಂದಾಗಿ ಜನರು ಹೈರಾಣಾಗಿದ್ದರು.
ಚರಂಡಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ತಾವೇ ಹೂಳು ತೆಗೆದು ಚರಂಡಿ ಸ್ವಚ್ಛಗೊಳಿಸಿದರು.
ಹಲವು ವರ್ಷಗಳಿಂದ ಚರಂಡಿ ಸ್ವಚ್ಛಗೊಳಿಸದ ಅಧಿಕಾರಿಗಳ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.