
ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ರಾಯರ ಪಾಳ್ಯದಲ್ಲಿ ಇಟ್ಟಿಗೆ ಕಾರ್ಖಾನೆಯಲ್ಲಿದ್ದ ಹೆಬ್ಬಾವನ್ನು ತುಮಕೂರಿನ ಉರಗ ರಕ್ಷಕರು, ರಕ್ಷಿಸಿ ದೇವರಾಯನ ದುರ್ಗ ಅರಣ್ಯಕ್ಕೆ ಬಿಟ್ಟಿದ್ದಾರೆ.
ಗ್ರಾಮದ ಪ್ರತಾಪ್ ಅವರ ಇಟ್ಟಿಗೆ ಕಾರ್ಖಾನೆಯಲ್ಲಿ 8 ಅಡಿ ಉದ್ದದ ಹೆಬ್ಬಾವು ಸೇರಿಕೊಂಡಿತ್ತು. ಅವರು ಉರಗ ರಕ್ಷಕರಿಗೆ ಮಾಹಿತಿ ನೀಡಿದರು. ಶ್ಯಾಮ್, ಮನು ಅಗ್ನಿ ಮತ್ತು ಚೇತನ್ ಅಗ್ನಿ ಬಂದು ಹೆಬ್ಬಾವು ಹಿಡಿದರು.
ಹೆಬ್ಬಾವುಗಳು ಬಯಲುಸೀಮೆ ಪ್ರದೇಶಗಳಲ್ಲಿ ಕಂಡು ಬರುವುದು ಅಪರೂಪ. ಕಾರ್ಖಾನೆಯಲ್ಲಿರುವ ನಾಯಿಯೊಂದು ಮರಿ ಹಾಕಿದ್ದು, ಅದನ್ನು ತಿನ್ನಲು ಬಂದಿರಬಹುದು ಎಂದು ಉರಗ ತಜ್ಞ ಶ್ಯಾಮ್ ಮಾಹಿತಿ ನೀಡಿದರು.
ಇಟ್ಟಿಗೆ ಕಾರ್ಖಾನೆ ಸಮೀಪ ರಾಮದೇವರ ಬೆಟ್ಟದ ಅರಣ್ಯ ಪ್ರದೇಶವಿದ್ದು, ಅಲ್ಲಿ ಹೆಬ್ಬಾವುಗಳು ಆಗಾಗ ಕಾಣಿಸುತ್ತಿರುತ್ತವೆ. ಅಲ್ಲಿಂದ ಹಾವು ಬಂದಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.